Friday, April 11, 2025
Google search engine

Homeಸ್ಥಳೀಯಸಿದ್ದರಾಮಯ್ಯ ಪತ್ನಿಗೆ ನೀಡಿರುವ ಮುಡಾ ನಿವೇಶನ ವಾಪಸ್ ಪಡೆಯಲು ಟಿ.ಜೆ. ಅಬ್ರಹಾಂ ಮನವಿ

ಸಿದ್ದರಾಮಯ್ಯ ಪತ್ನಿಗೆ ನೀಡಿರುವ ಮುಡಾ ನಿವೇಶನ ವಾಪಸ್ ಪಡೆಯಲು ಟಿ.ಜೆ. ಅಬ್ರಹಾಂ ಮನವಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಇದನ್ನು ಖರೀದಿ ಮಾಡಿದ್ದಾರೆ. ಈ ಖರೀದಿಯೇ ಅಕ್ರಮ ಆಗಿರುವುದರಿಂದ ಅವರಿಗೆ ನಿವೇಶನ ನೀಡಲು ಬರುವುದಿಲ್ಲ. ಹೀಗಾಗಿ ಹಂಚಿಕೆ ಆಗಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅಬ್ರಹಾಂ ‘ ಯಡಿಯೂರಪ್ಪ ಮೇಲೆ ಆರೋಪ ಮಾಡಿದ್ದಾಗ ಇದೇ ಸಿದ್ದರಾಮಯ್ಯ ನನ್ನ ಬೆನ್ನು ತಟ್ಟಿದ್ದರು. ಈಗ ಬ್ಲಾಕ್ ಮೇಲರ್ ಆದೆನೇ’ ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular