Friday, April 18, 2025
Google search engine

Homeರಾಜ್ಯನುಡಿದಂತೆ ನಡೆದ ಸಿದ್ದರಾಮಯ್ಯ 'ಸ್ತ್ರೀ ಶಕ್ತಿ ಸ್ವಸಹಾಯ ಸಂಘ'ಗಳ ಸಾಲ‌ ಮನ್ನಾ ಮಾಡ್ತಾರೆ: ಸಾಲ ವಸೂಲಿಗಾರರಿಗೆ...

ನುಡಿದಂತೆ ನಡೆದ ಸಿದ್ದರಾಮಯ್ಯ ‘ಸ್ತ್ರೀ ಶಕ್ತಿ ಸ್ವಸಹಾಯ ಸಂಘ’ಗಳ ಸಾಲ‌ ಮನ್ನಾ ಮಾಡ್ತಾರೆ: ಸಾಲ ವಸೂಲಿಗಾರರಿಗೆ ಗ್ರಾಮಕ್ಕೆ ಪ್ರವೇಶ ನಿರ್ಬಂಧ

ಕೋಲಾರ: ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸಾಲ ವಸೂಲಿಗಾರರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಗ್ರಾಮಸ್ಥರು ನಿರ್ಬಂಧ ಹೇರಿರುವ ಘಟನೆ ಕೋಲಾರ ತಾಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚುನಾವಣಾ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು,‌ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀ‌ ಶಕ್ತಿ ಸ್ವಸಹಾಯ ಗುಂಪುಗಳ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದರು.

ಈ ಹಿ‌ನ್ನೆಲೆ ಸಹಕಾರ ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ನಾವು ಮರು ಪಾವತಿ ಮಾಡುವುದಿಲ್ಲ ಎಂದು ಮಹಿಳೆಯರು ಪಟ್ಟುಹಿಡಿದ್ದಾರೆ.

ತಾಲೂಕಿನ ಮಟ್ನಹಳ್ಳಿ ಗ್ರಾಮದ ಫಲಾನುಭವಿ ಮಹಿಳೆಯರು, ಸಾಲ ವಸೂಲಾತಿ ಹೆಸರಿನಲ್ಲಿ ಬ್ಯಾಂಕ್ ಸಿಬ್ಬಂದಿ ಅಥವಾ ಅಧಿಕಾರಿಗಳು ಗ್ರಾಮಕ್ಕೆ ಬಂದರೆ ಎಚ್ಚರ. ನುಡಿದಂತೆ ನಡೆದ ಸಿದ್ದರಾಮಯ್ಯ ಅವರು ಸಾಲ‌ ಮನ್ನಾ ಮಾಡ್ತಾರೆ ಎಂದು ಫ್ಲೆಕ್ಸ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಸಾಲ ವಸೂಲಿ ಹೆಸರಿನಲ್ಲಿ ನಮಗೆ ಕಿರುಕುಳ ನೀಡಬೇಡಿ. ನಮ್ಮ ಸಾಲವನ್ನು ಸಿದ್ದರಾಮಯ್ಯ ಅವರು ಮನ್ನಾ ಮಾಡುತ್ತಾರೆ. ಸಾಲದ ಹೆಸರಿನಲ್ಲಿ‌ ಕಿರುಕುಳ ನೀಡಲು ಮುಂದಾದರೆ ನಿಮ್ಮ ಗ್ರಹಚಾರ ಬಿಡಿಸುತ್ತೇವೆ  ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular