Sunday, April 5, 2026
Google search engine

Homeರಾಜಕೀಯಸಿದ್ದರಾಮಯ್ಯ ವರ್ತನೆ ಕಿರಿಕಿರಿ ತಾಂತ್ರಿಕ ಬದಲಾವಣೆ ಅರಿವಿಲ್ಲ : ವಿ. ಸೋಮಣ್ಣ

ಸಿದ್ದರಾಮಯ್ಯ ವರ್ತನೆ ಕಿರಿಕಿರಿ ತಾಂತ್ರಿಕ ಬದಲಾವಣೆ ಅರಿವಿಲ್ಲ : ವಿ. ಸೋಮಣ್ಣ

ದಾವಣಗೆರೆ : ತಮ್ಮನ್ನು ಸೋಮಾರಿ ಎಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ, ನಾನು ಸಿದ್ದರಾಮಯ್ಯರಷ್ಟು ಸೋಮಾರಿಯಲ್ಲ. ನನಗೆ ಸಮರ್ಪಕ ಬುದ್ಧಿಶಕ್ತಿ ಇದೆ, ನಾನು ಕೆಲಸ ಮಾಡಿದ್ದೇನೆ. ಯಾವುದೇ ಸಂಶಯ ಇದ್ದರೆ, ಅವರು ದೆಹಲಿಯಲ್ಲಿರುವ ನನ್ನ ಕಚೇರಿಗೆ ಬಂದು ಕೆಲವು ಗಂಟೆಗಳ ಕಾಲ ಕೂತು ನೋಡಲಿ ಎಂದು ಹೇಳಿದರು.

ನಿನ್ನೆ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ರಾಜ್ಯಕ್ಕೆ ತಂದ ಅನುದಾನಗಳು ಹಾಗೂ ಕೈಗೊಂಡ ಕೆಲಸಗಳ ಕುರಿತು ಮಾತನಾಡಿದ ಅವರು, ರೈಲ್ವೆಯ ಕಾರ್ಯನಿರ್ವಹಣೆಯನ್ನು ತಿಳಿಯಲು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರೈಲು ಸುರಂಗಕ್ಕೆ ಭೇಟಿ ನೀಡುವಂತೆ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೇವೆ, ಒಂದೇ ವಿಚಾರಧಾರೆ ಹೊಂದಿದ್ದೇವೆ. ಅವರ ಇತ್ತೀಚಿನ ವರ್ತನೆ ಕಿರಿಕಿರಿಯಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ತಾಂತ್ರಿಕ ಬದಲಾವಣೆಗಳನ್ನು ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಈಗ ಅವರು ನಿದ್ದೆ ಮೂಡ್ ನಲ್ಲಿದ್ದಾರೆ ಎಂದು ಟೀಕಿಸಿದರು.

ನಾನು ರೈಲ್ವೆ ಸಚಿವನಾದ ಮೇಲೆ ದಕ್ಷಿಣ ಭಾರತದಲ್ಲಿ 18 ಹೊಸ ರೈಲುಗಳನ್ನು ಆರಂಭಿಸಲಾಗಿದೆ. 62 ನಿಲ್ದಾಣಗಳಲ್ಲಿ ರೈಲು ನಿಲುಗಡೆ ವ್ಯವಸ್ಥೆ ಮಾಡಿದ್ದೇನೆ. 24 ರೈಲುಗಳ ಸಂಚಾರವನ್ನು ಇತರ ಸ್ಥಳಗಳಿಗೆ ವಿಸ್ತರಿಸಲಾಗಿದೆ. ಭದ್ರಾವತಿ-ಚಿಕ್ಕಜಾಜೂರು ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸಲಾಗಿದ್ದು, ವಿವರವಾದ ಯೋಜನಾ ವರದಿ (DPR) ಸಿದ್ಧವಾಗುತ್ತಿದೆ. ಚಿಕ್ಕಜಾಜೂರು-ಬಳ್ಳಾರಿ ಡಬಲ್ ಟ್ರ್ಯಾಕ್ ರೈಲು ಮಾರ್ಗದ ನಿರ್ಮಾಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸ್ಥಗಿತಗೊಂಡಿದ್ದ 11 ರೈಲು ಯೋಜನೆಗಳ ಅನುಷ್ಠಾನಕ್ಕಾಗಿ 58,000 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರ ಜೊತೆಗೆ, ರಾಜ್ಯದ 61 ರೈಲು ನಿಲ್ದಾಣಗಳನ್ನು 1,900 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 11 ವರ್ಷಗಳಲ್ಲಿ 1,657 ಕಿಮೀ ರೈಲು ಹಳಿ ನಿರ್ಮಿಸಲಾಗಿದೆ. ರೈಲು ಮಾರ್ಗಗಳ ವಿದ್ಯುದೀಕರಣದಲ್ಲಿ 97 ಶೇಕಡಕ್ಕಿಂತ ಹೆಚ್ಚು ಕೆಲಸ ಪೂರ್ಣಗೊಂಡಿದೆ. ಇತರರನ್ನು ಟೀಕಿಸುವಾಗ ಲಘುವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular