ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದವೇ ನನಗೆ ದೊಡ್ಡ ಪದವಿ ಸಿಕ್ಕಿದಂತಾಗಿದ್ದು, ನಿಗಮ, ಮಂಡಳಿ ಮುಂತಾದ ಇನ್ಯಾವುದೇ ಸ್ಥಾನಮಾನ, ಪದವಿಗಳು ನನಗೆ ಬೇಡ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಜೆ.ಜೆ.ಆನಂದ್ ಹೇಳಿದರು.
ಟಿ.ಕೆ.ಲೇ ಔಟ್‌ನಲ್ಲಿರುವ ಮೌರ್ಯ ಆಸ್ಪತ್ರೆಯ ಸಿಬ್ಬಂದಿಗಳು ಏರ್ಪಡಿಸಿದ್ದ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿ, ಸಿಹಿ ವಿತರಣೆ ಮಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ದೇಶಾದ್ಯಂತ ಪ್ರಸಿದ್ಧಿ ಪಡೆದಿವೆ, ಕರ್ನಾಟಕ ರಾಜ್ಯ ಈಗ ದೇಶಕ್ಕೆ ಮಾದಿಯಾಗಿವೆ. ಅವರ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಈಗಾಗಲೇ ನಾನು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿಯೇ ನನಗೆ ಸಂತೋಷ ಸಿಕ್ಕಿದೆ, ನಾವು ನಮ್ಮ ಪಕ್ಷವನ್ನು ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತಿದ್ದರೆ ನಮಗೆ ಅಧಿಕಾರ ಹುಡುಕಿಕೊಂಡು ಬರುತ್ತದೆ. ಆ ನಂಬಿಕೆ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಸಹ ಜೆ.ಜೆ.ಆನಂದ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮೌರ್ಯ ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ರೋಹನ್ ಆನಂದ್, ಮೌರ್ಯ ಆಸ್ಪತ್ರೆಯ ಮುಖ್ಯಸ್ಥರಾದ ಮಂಜುನಾಥ್ ವೈ.ಕೆ., ಯೂನಿಟ್ ಹೆಡ್ ಮಂಜುನಾಥ್ ವಿ.ಎಸ್., ಸಿಪಿಎಂ ಮಂಜುನಾಥ್ ಆರ್., ಶಶಿ, ವಿನೋದ್ ಆರ್ಯನ್ ನಾಯರ್, ಮನೋಜ್ ಮುಂತಾದವರು ಇದ್ದರು.