ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪಿಕ್ ಪಾಕೇಟ್ ಸರ್ಕಾರ ಆಗಿದೆ, ನಿಮ್ಮ ದುಡ್ಡು ಹೊಡೆದು ನಿಮಗೆ ಗ್ಯಾರಂಟಿ ಮೂಲಕ ಕೊಡುತ್ತಿರುವ ಸರ್ಕಾರ ಎಂದು ರಾಜ ಸರ್ಕಾರ ಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅವರು ರೇಡಿಯೋ ಮೈದಾನದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್, ಬಿಜೆಪಿ ಮೈತ್ರಿ ಪಕ್ಷ ಅಭ್ಯರ್ಥಿ ಮಾಜಿ ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಬಾರಿ ಬಹಿರಂಗ ಸಭೆ ಹಾಗೂ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಜನರ ಹಿತಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು, ೨೦೦೬ ರಲ್ಲಿ ನಾನು ಮತ್ತು ಬಿ.ಎಸ್.ಯಡಿಯೂರಪ್ಪ ಸೇರಿ ಸರ್ಕಾರ ರಚಿಸಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ರಾಜ್ಯದ ಜನರಿಗೆ ಕೊಟ್ಟವೆವು, ಸಾರಾಯಿ, ಲಾಟರಿ ನಿಷೇದ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ,ನೀರಾವರಿ ಯೋಜನೆ ಕೊಟ್ಟವು, ಇವಾಗ ಮೈತ್ರಿ ಮಾಡಿ ಕೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶಯದಿಂದ ರಾಜ್ಯದ ಜನರಿಗೆ ಉತ್ತಮ ಆಡಳಿತವನ್ನು ಕೇಂದ್ರ ಸರ್ಕಾರದ ಮೂಲಕ ಮಾಡುವ ಉದ್ದೇಶದಿಂದ ಎಂದು ಹೇಳಿದರು.
ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ರೈತ ಸಂಕಷ್ಟ ಸ್ಪಂದಿಸಿಲ್ಲ, ಬರಗಾಲ ಬಂದಿದೆ, ರೈತರ ಬೆಳೆ ನಷ್ಟವಾಗಿದೆ, ೩೮ ಸಾವಿರ ಕೋಟಿ ಬೆಳೆ ನಷ್ಟವಾಗಿದ್ದರೆ, ರಾಜ್ಯ ಸರ್ಕಾರ ೬೫೪ ಕೋಟಿ ಬಿಡುಗಡೆ ಮಾಡಿದೆ, ಹೆಕ್ಟೇರ್ ಗೆ ಎರಡು ಸಾವಿರ ಮಾತ್ರ ಕೊಟ್ಟಿದ್ಸಾರೆ, ಇದರಲ್ಲಿ ಕೇಂದ್ರದ ಪಾಲು ಶೇಕಡ ೭೫% ೪೫೦ ಕೋಟಿ ಸೇರಿದೆ ಎಂದು ತಿಳಿಸಿದರು.
ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಈಗಾಗಲೇ ೧.೫ ಲಕ್ಷ ಕೋಟಿ ಸಾಲ ಮಾಡಿದ್ದಾರೆ, ನಿಮ್ಮ ಕುಟುಂಬದವರ ಮೇಲೆ ೩೬ ಸಾವಿರ ಸಾಲ ಹೊರೆಸಿದ್ದಾರೆ ಎಂದ ಅವರು ಲೋಕಸಭಾ ಚುನಾವಣಾ ಕಳೆದ ಮೇಲೆ ಸರ್ಕಾರ ಇರುತ್ತೊ ಇಲ್ಲವೊ ಗೊತ್ತಿಲ್ಲ, ನಾವು ಹೇಳುತ್ತಿಲ್ಲ, ಅವರ ಶಾಸಕರೇ ಹೇಳುತ್ತಿರುವುದು, ಎಂದರು.
ನಾನು ಮತ್ತು ಯಡಿಯೂರಪ್ಪ ಅವರ ಮೈತ್ರಿ ಸರ್ಕಾರದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಕೇವಲ ೫ ಸಾವಿರದಲ್ಲಿ ಟಿ.ಸಿ ಕೊಡುತ್ತಿದ್ಸವು, ಇವಾಗ ೨ ಲಕ್ಷ ಕೊಟ್ಟು ರೈತರು ಟಿ.ಸಿ.ಪಡೆಯ ಬೇಕಿದೆ, ಆದ್ದರಿಂದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಜನತೆ ಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನಿಮ್ಮ ಶಾಸಕರಾಗಿದ್ದ ನನ್ನ ಗೆಳೆಯ ಸಾ.ರಾ.ಮಹೇಶ್ ಅವರನ್ನು ಸೋಲಿಸಿ ಎಷ್ಟು ಕಷ್ಟ ಪಡುತ್ಗಿದ್ದೀರಿ ಗೊತ್ತಿದೆ, ೧೧ ತಿಂಗಳಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿಲ್ಲ, ಆದ್ದರಿಂದ ಸಾ.ರಾ.ಮಹೇಶ್ ಬೆಂಬಲ ಕೋಸ್ಕರ ನಾನು ಈ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆದೆ ಎಂದರು.
ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಸಂಪೂರ್ಣವಾಗಿ ದಿವಾಳಿ ಆಗಿದೆ, ಸರ್ಕಾರ ಬದುಕಿದ್ದು ಸತ್ತಂತೆ ಆಗಿದೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ಹಿತ ಮರೆತಿದ್ದಾರೆ, ಗ್ಯಾರಂಟಿ ಯೋಜನೆಗಾಗಿ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ್ದಾರೆ ಎಂದರು
ನನ್ನ ವೀರೇಶ್ವರ ಸಮಾಜದ ಬಂದುಗಳು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಲ್ಲ ನಾನು ನಿಮ್ಮ ಯಡಿಯೂರಪ್ಪ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಮತಹಾಕಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದಲ್ಲದೆ ಅತ್ಯಂತ ಹೆಚ್ಚಿನ ಮತಗಳನ್ನು ಕೊಟ್ಟು ಮಾಜಿ ಸಿ.ಎಂ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ, ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿ ನಿಮ್ಮಗಳ ಸಂಕಷ್ಟಕ್ಕೆ ನೆರವಾಗಲಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರದಲ್ಲಿ ೨೦ ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಗಳನ್ನು ಕೊಡಲಾಗುತ್ತಿತ್ತು ಆದರೆ ಸಿದ್ದರಾಮಯ್ಯನವರು ನಿಲ್ಲಿಸಿದರು. ಕಿಸಾನ್ ಸಮ್ಮಾನ್ ಯೋಜನೆಗ ಕೇಂದ್ರದಿಂದ ೬ ಸಾವಿರ ಮತ್ತು ನಾನು ಸಿ.ಎಂ.ಆಗಿದ್ದಾಗ ೪ ಸಾವಿರ ಸೇರಿ ೧೦ ಸಾವಿರ ರೈತರಿಗೆ ಕೊಡುತ್ತಿದ್ಸವು ಎಲ್ಲವನ್ನು ನಿಲ್ಲಿಸಿದರು. ಚಿಂತಿಸ ಬೇಡಿ ಎಲ್ಲವನ್ನು ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿ ಕೊಡುತ್ತಾರೆ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ನಾನು ಭರವಸೆ ಕೊಡುತ್ತೇನೆ ಎಂದರು.