ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿ ಅಗಲಿವೆ ಎಂದು ಮೈಸೂರು ಜಿಲ್ಲಾ ಹಿರಿಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಹನಸೋಗೆ ಸಿ.ಜೆ.ಪಾಲಕ್ಷಗೌಡರು ಹೇಳಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೇಟಿ ಮಾಡಿ ನಂತರ ಅಭಿನಂದಿಸಿ ಅವರು ಮಾತನಾಡಿದರು.
ಹಿಂದಿನಿಂದಲು ಶಿಕ್ಷಕರು ಮತ್ತು ಪದವಿಧರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸುತ್ತಿರುವ ಮರಿತಿಬ್ಬೇಗೌಡರನ್ನ ಗುರುತಿಸಿ ಕಾಂಗ್ರೇಸ್ ಪಕ್ಷ ಟೀಕೇಟ್ ನೀಡುರುವುದು ಸಂತಸ ತಂದಿದೆ ಎಂದರು.
.ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಪಕ್ಷದ ಅಲೆ ಇದ್ದು ಮತದಾರರು ಮರಿತಿಬ್ಬೇಗೌಡರನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಡಿಸಿದ ಪಾಲಾಕ್ಷಗೌಡರು ತಾವು ಮತ್ತು ತಮ್ಮ ಬೆಂಬಲಿಗರು ಈ ಕ್ಷೇತ್ರದಲ್ಲಿರುವ ಮತದಾರರು ಬೇಟಿ ಮಾಡಿ ಮರಿತಿಬ್ಬೇಗೌಡರ ಪರವಾಗಿ ಮತಯಾಚಿಸುವುದಾಗಿ ತಿಳಿಸಿದರು