ದಾವಣಗೆರೆ : ಲೋಕಸಭಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಜೈನ ಧರ್ಮದ 24ನೇ ತೀರ್ಥಂಕರ ಶ್ರೀ ಭಗವಾನ್ ಮಹಾವೀರ್ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಮಹಾವೀರರು ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಪರಿಶುದ್ಧತೆ, ಅನುಬಂಧ ವಚನ ಪಾಲಿಸುವುದು ಆಧ್ಯಾತ್ಮಿಕ ವಿಮೋಚನೆಗೆ ಅಗತ್ಯ ಎಂದು ಪ್ರತಿಪಾದಿಸಿದವರು. ಇವರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಕಾರ್ಯಕ್ರಮದಲ್ಲಿ ಜೈನ್ ಸಂಘದ ಉಪಾಧ್ಯಕ್ಷ ಪಾರ್ಶ್ವನಾಥ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳನಾಯ್ಕ, ಶಿವಾಜಿ ಟಿ, ನರೇಂದ್ರ ಕುಮಾರ್, ಅಶೋಕ್ ಕುಮಾರ್, ರಮೇಶ್, ಅಶೋಕ್ ಕುಮಾರ್ ಶ್ರೀ ಮಾಳ್, ಸುನಿಲ್ ಕುಮಾರ್ ಓಸ್ವಾಲ್, ಭಾವನ ಮೆಹೆತಾ, ದೀಪಾ.ಜೆ, ಅಶೋಕ್ ಕುಮಾರ್ ವರ್ಣೇಚಂದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.