ಹುಣಸೂರು: ಜಪಾನ್ ದೇಶದಲ್ಲಿ ಭಾರತದಂತೆ ಕಠಿಣ ಶಿಕ್ಷಣವಿಲ್ಲ. ನಮ್ಮದು ಸರಳ ಶೈಕ್ಷಣಿಕ ವ್ಯವಸ್ಥೆ ಎಂದು ಜಪಾನಿನ ವಿದ್ಯಾರ್ಥಿ ತೇಸೂಯಾ ತಿಳಿಸಿದರು.

ನಗರದ ರೋಟರಿ ವಿದ್ಯಾಸಂಸ್ಥೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಒಂಬತ್ತನೇ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ, ಕಾರ್ಯಗಾರದಲ್ಲಿ ಮಾತನಾಡಿದ ಅವರು, ಜಪಾನಿನ ಶಿಕ್ಷಣ ಪದ್ದತಿಯಲ್ಲಿ, ಪರೀಕ್ಷಾ ವಿಧಾನದಲ್ಲೂ ಕೂಡ ವರುಷದಲ್ಲಿ ಒಂದು ಪಠ್ಯ ಪುಸ್ತಕಕ್ಕೆ ಒಂದರಂತೆ, ಐದು ಪಠ್ಯ ಪುಸಕಕ್ಕೆ ಐದು ಪರೀಕ್ಷೆಗಳು ನಡೆಯಲಿದ್ದು ವಿದ್ಯಾರ್ಥಿಗಳಿಗೆ ಹೊರೆ ಕಮ್ಮಿಯಾಗಲಿದೆ. ಅದೇ ರೀತಿ ತಿಂಗಳಿಗೆ ಇಪ್ಪತು ತರಗತಿಗಳು ಮಾತ್ರ ನಡೆಯಲಿದ್ದು, ಉಳಿದ ಹತ್ತು ದಿನಗಳು ತಂದೆ ತಾಯಿಗೆ ನೆರವಾಗುವ ದಿನಗಳಾಗಿವೆ ಎಂದರು.
ಅದೇ ರೀತಿ ಜಪಾನ್ ದೇಶದಲ್ಲಿ ವಿದ್ಯಾಭ್ಯಾಸ ದ ಕಲಿಕಾ ದಿನಗಳಲ್ಲೆ ಬದುಕಿಗೆ ಬೇಕಾದ ಹಣವನ್ನು ಹೇಗೆ ಗಳಿಸಬೇಕು ಎಂಬ ನಿಯಮವನ್ನು ರೂಪಿಸಲಾಗುತ್ತದೆ. ಆ ಕಾರಣಕ್ಕೆ ಮುಂದುವರಿದ ದೇಶಗಳಲ್ಲಿ ಜಪಾನ್ ಕೂಡ ಒಂದಾಗಿದೆ. ಜತೆಗೆ ಭಾರತ ದೇಶದೊಂದಿಗೆ ಇನ್ನುಳಿದ ದೇಶಕ್ಕಿಂತ ಉತ್ತಮ ಭಾಂದವ್ಯ ಹೊಂದಿದೆ. ಆ ನಿಟ್ಟಿನಲ್ಲಿ ಭಾರತದ ಯುವ ಪ್ರತಿಭೆಗಳು ಹಲವು ಹೊರ ದೇಶಗಳಲ್ಲಿ ಅತ್ಯುತ್ತಮ ಹುದ್ದೆಯಲ್ಲಿ ಇರುವುದನ್ನು ಕಾಣಬಹುದಾಗಿದೆ ಎಂದರು.
ಉದ್ಯಮಿ ಹಾಗೂ ರೊ. ಗೌತಮ್ ಮಾತನಾಡಿ, ನಾವು ಹೊರದೇಶಕ್ಕೆ ಪ್ರವಾಸಕ್ಕೆ ಹೋದಾಗ, ಅಲ್ಲಿನ ಶಿಸ್ತು, ಸುವ್ಯವಸ್ಥೆ, ಕಾನೂನು ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವ ರೀತಿ ನಿಜಕ್ಕೂ ವಿಸ್ಮಯಕಾರಿ. ಅಂತಹ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಹುಣಸೂರು ರೊ. ಸಹಾಯಕ ಗೌರ್ನರ್ ಆರ್.ಆನಂದ್, ರೋಟರಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ದೀಪು, ಶಿಕ್ಷಕ ಅಕ್ಮಲ್, ರೊ.ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಇದ್ದರು.