Saturday, April 19, 2025
Google search engine

Homeಸ್ಥಳೀಯಸರಳವಾಗಿ ನಾಡಪ್ರಭು ಕೆಂಪೇಗೌಡರವರ ೫೧೪ನೇ ಜಯಂತಿ ಆಚರಣೆ

ಸರಳವಾಗಿ ನಾಡಪ್ರಭು ಕೆಂಪೇಗೌಡರವರ ೫೧೪ನೇ ಜಯಂತಿ ಆಚರಣೆ


ಕೊಳ್ಳೇಗಾಲ: ನಾಡಪ್ರಭು ಕೆಂಪೇಗೌಡರವರ ೫೧೪ ನೇ ಜಯಂತಿಯನ್ನು ಸರಳವಾಗಿ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ಆಚರಣೆ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ, ಉಪವಿಭಾಗಾಧಿಕಾರಿ ಗೀತಾ ಹುಡೇದ್ ಅವರು ಪುಷ್ಪನಮನ ಅರ್ಪಿಸುವ ಮೂಲಕ ಆಚರಿಸಿದರು.
ಬಳಿಕ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರವರು ಮಹಾನಗರಗಳನ್ನು ನಿರ್ಮಾಣ ಮಾಡಿದ್ದಂತವರು, ಕೃಷಿ ಮಾರುಕಟ್ಟೆಗಾಗಿ ನಗರಗಳನ್ನು ನಿರ್ಮಾಣ ಮಾಡುವ ಮೂಲಕ ಯೋಜನೆ ಹಾಕಿ ಕಾರ್ಯರೂಪಕ್ಕೂ ಸಹಾ ತಂದಿದ್ದಾರೆ. ಹಾಗೂ ರೈತರಿಗಾಗಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ಜನ್ಮದಿನವನ್ನು ನಾವೇಲ್ಲಾ ಆಚರಿಸುತ್ತಿರುವುದು ಸಂತೋಷಕರವಾಗಿದೆ. ಇದರೊಂದಿಗೆ ಕೆಂಪೇಗೌಡರ ಜೀವನಚರಿತ್ರೆಯನ್ನು ಓದುವ ಮೂಲಕ ಅವರ ಮಾರ್ಗದಲ್ಲಿ ನಡೆಯೋಣ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಮಂಜುಳಾ, ತಾ.ಪಂ ಇಒ ಮಹೇಶ್, ಬಿಇಒ ಚಂದ್ರಪಾಟೀಲ್, ಸಿಡಿಪಿಒ ನಾಗೇಶ್, ಸಮಾಜ ಕಲ್ಯಾಧಿಕಾರಿ ಗಂಗಾಧರ್, ಶಿರೆಸ್ತದಾರ್ ಶ್ರೀನಿವಾಸ್, ಚುನಾವಣಾ ಶಿರೆಸ್ತದಾರ್ ಕೃಪಕಾರ್, ಕಾರ್ಯಕ್ರಮ ವಿಷಯ ನಿರ್ವಾಹಕರು ಶ್ರೀಧರ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ ಕಾರ್ಯದರ್ಶಿ ಬಸವೇಗೌಡ, ಶಿವಮಲ್ಲೇಗೌಡ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular