Thursday, February 5, 2026
Google search engine

Homeಅಪರಾಧಮೈಸೂರು, ಟಿ.ನರಸೀಪುರದಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಮೈಸೂರು, ಟಿ.ನರಸೀಪುರದಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಮೈಸೂರು: ನಗರದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. ಇಬ್ಬರು ಭ್ರಷ್ಟರಿಗೆ ಸೇರಿದ ಒಟ್ಟು 7 ಸ್ಥಳದಲ್ಲಿ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ. ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಸೇರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಡೆಫ್ಯುಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಎರಡು ನಿವಾಸ ಹಾಗೂ ಕಚೇರಿಯಲ್ಲಿ ಲೊಕಾಯುಕ್ತ ಪೊಲೀಸರ ಶೋಧ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular