Thursday, April 3, 2025
Google search engine

Homeರಾಜ್ಯಸುದ್ದಿಜಾಲಬೇಡಿಕೆಯಂತೆ ನಾಮಧಾರಿ ಸಮಾಜ ಪ್ರವರ್ಗ ೨ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಡಿ.ರವಿಶಂಕರ್

ಬೇಡಿಕೆಯಂತೆ ನಾಮಧಾರಿ ಸಮಾಜ ಪ್ರವರ್ಗ ೨ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಡಿ.ರವಿಶಂಕರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ನಾಮಧಾರಿ ಬಹುದಿನಗಳ ಬೇಡಿಕೆಯಂತೆ ಅವರನ್ನು ಪ್ರವರ್ಗ ೨ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು ಈ ವಿಚಾರದಲ್ಲಿ ಸಮಾಜದ ಮುಖಂಡರು ನನ್ನೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಸಮಾಜದ ವತಿಯಿಂದ ನಡೆದ ಶಾಸಕರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ನಾಮಧಾರಿ ಸಮಾಜದ
ಮುಖಂಡರೊಡಗೂಡಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಸಂಬoಧ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದ ನಾಮಧಾರಿ ಸಮುದಾಯದ ಮತದಾರ ಬಾಂಧವರು ನನ್ನನ್ನು ಹೆಚ್ಚಾಗಿ ಬೆಂಬಲಿಸಿ ಶಾಸಕನಾಗಲು ಹರಸಿ ಆಶೀರ್ವಾದ ಮಾಡಿದ್ದು ಇದನ್ನು ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದ ಶಾಸಕರು ನೀವು ಕಳೆದ ಹಲವು ದಶಕಗಳಿಂದ ಉತ್ತಮ ಕೆಲಸ ಮಾಡುತ್ತಿದ್ದು ಇದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.

ಸಮಾಜದ ಬಾಂಧವರು ಇಂದು ನೀಡಿರುವ ಎಲ್ಲಾ ಮನವಿ ಮತ್ತು ಬೇಡಿಕೆಗಳನ್ನು ಈಡೇರಿಸಲು ಪ್ರ‍್ರಾಮಾಣಿಕ ಪ್ರಯತ್ನ ಮಾಡುವುದಾಗಿ ನುಡಿದ ಶಾಸಕ ಡಿ.ರವಿಶಂಕರ್ ಭವಿಷ್ಯದಲ್ಲಿ ನೀವು ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರ ವಹಿಸಲು ತೀರ್ಮಾನ ಕೈಗೊಂಡಿದ್ದು ಇದಕ್ಕೆ ಸರ್ಕಾರದಿಂದ ಅಗತ್ಯ
ಅನುದಾನ ಕೊಡಿಸುವುದರೊಂದಿಗೆ ಶಾಸಕರ ನಿಧಿಯಿಂದಲೂ ಸಹಕಾರ ನೀಡುವುದಾಗಿ ಪ್ರಕಟಿಸಿದರು.

ನಾಮಧಾರಿಗೌಡ ಸಮುದಾಯ ಭವನದ ಮುಂದುವರೆದ ಕಾಮಗಾರಿಗಾಗಿ ನಾನು ಈ ಹಿಂದೆ ೧೫ ಲಕ್ಷ ಹಣವನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಂದ ಕೊಡಿಸಿದ್ದು ಈಗಲೂ ಹೆಚ್ಚುವರಿ ಕಟ್ಟಡ ಮತ್ತು ಶೌಚಾಲಯ ನಿರ್ಮಾಣದ ಕೆಲಸಕ್ಕೆ ಮತ್ತಷ್ಟು ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾಮಧಾರಿಗೌಡ ಸಮಾಜದವರಿಗೆ ಆಧ್ಯತೆಯ ಮೇರೆಗೆ ಅವಕಾಶ ನೀಡುವುದಾಗಿ ಹೇಳಿದರಲ್ಲದೆ ಈಗಾಗಲೇ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಮ್ಮ ಸಮಾಜದ ಲತಾರವಿ ಅವರಿಗೆ ನೀಡಿದ್ದು ಇವರ ಜೊತೆಗೆ ಈಗ ಆಶ್ರಯ ಸಮಿತಿ ಸದಸ್ಯರನ್ನಾಗಿ ಸಮಂತ್
ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತಲ್ಲದೆ ಶಾಸಕ ಡಿ.ರವಿಶಂಕರ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಹಲವು
ಬೇಡಿಕೆಗಳನ್ನು ಈಡೇರಿಸುವಂತೆ ಭಿನ್ನವತ್ತಳೆ ನೀಡಲಾಯಿತು.

ಅಖಿಲ ನಾಮಧಾರಿಗೌಡ ಕೇಂದ್ರ ಸಮಿತಿ ಅಧ್ಯಕ್ಷ ಪಿ.ಚನ್ನರೇವಣ್ಣ, ತಾಲೂಕು ಘಟಕದ ಅಧ್ಯಕ್ಷ .ಆರ್.ಅಶೋಕ್‌ಕುಮಾರ್, ಸಂಘದ ಕಾರ್ಯದರ್ಶಿ ಎಂ.ಆರ್.ಪುಟ್ಟರಾಜು, ನಿರ್ದೇಶಕ ಪುರುಷೋತ್ತಮ ಪುರಸಭೆ ಮಾಜಿ ಸದಸ್ಯ ಕೆ.ಆರ್.ಗಿರೀಶ್ , ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಕೆ.ಎಸ್.ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭೆ ಸದಸ್ಯ ನಟರಾಜು, ತಾ.ಪಂ. ಮಾಜಿ ಸದಸ್ಯ
ಜಯರಾಮೇಗೌಡ, ಸಮಾಜದ ಮುಖಂಡರಾದ ನೀಲಕಂಠೇಗೌಡ, ದಶರಥ, ಶೋಭಾ, ಮಹೇಶ್, ತಿಮ್ಮೇಗೌಡ, ನಂಜಪ್ಪ, ಸುಧಾಕರ್, ಸಮಂತ್, ಸಂಜಯ್ ತಿಲಕ್.ಜೆ, ರಾಮಚಂದ್ರು, ಕೃಷ್ಣೇಗೌಡ, ಜಗದೀಶ್, ನಾ.ರಾ.ಗಿರೀಶ್, ಎಸ್.ಪಿ.ತ್ಯಾಗರಾಜ್, ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ತಾಂಡವಮೂರ್ತಿ
ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular