Tuesday, April 8, 2025
Google search engine

Homeಅಪರಾಧದೇಗುಲಕ್ಕೆ ಕನ್ನ ಹಾಕಲು ಬರುತ್ತಿದ್ದಂತೆ ಮೊಳಗಿದ ಸೈರನ್: ಕಳ್ಳರು ಪರಾರಿ

ದೇಗುಲಕ್ಕೆ ಕನ್ನ ಹಾಕಲು ಬರುತ್ತಿದ್ದಂತೆ ಮೊಳಗಿದ ಸೈರನ್: ಕಳ್ಳರು ಪರಾರಿ

ಚಾಮರಾಜನಗರ: ದೇವಾಲಯಕ್ಕೆ ಕನ್ನ ಹಾಕಲು ವಿಫಲ ಯತ್ನ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಳೆದ ರಾತ್ರಿ ನಡೆದಿದೆ. ಟವೆಲ್‌ನ್ನು ಮುಖಕ್ಕೆ ಕಟ್ಟಿಕೊಂಡು ಒಳ ಬಂದಿದ್ದ ಚಾಲಾಕಿಗಳು ಹಾರೆಯ ಸಹಾಯದಿಂದ ದೇಗುಲದ ಒಳಬಾಗಿಲನ್ನು ಮೀಟಿದ ವೇಳೆ ಸೈರನ್ ಮೊಳಗಿದೆ.

ಇದರಿಂದ, ಬೆಚ್ಚಿಬಿದ್ದ ಇಬ್ಬರು ಖದೀಮರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬರಿಗೈಯಲ್ಲಿ ಕಾಲ್ಕಿತ್ತಿದ್ದಾರೆ. ಹುಂಡಿ ಕದಿಯಲು ಬಂದಿದ್ದ ಇಬ್ಬರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೂರನೇ ಬಾಗಿಲಿನ ಬೀಗಕ್ಕೆ ಹಾರೆಯಿಂದ ಮೀಟಿದಾಗ ಸೈರನ್ ಆನ್ ಆಗಿದ್ದರಿಂದ ಹುಂಡಿ ಕಳವು ವಿಫಲವಾಗಿದೆ. ಅಧಿಕ ಆದಾಯ ಬರುವ ದೇವಾಲಯಗಳಲ್ಲಿ ಸಿದ್ದರಾಮೇಶ್ವರ ದೇವಾಲಯವೂ ಒಂದಾಗಿರುವುದರಿಂದ ಕಳ್ಳರು ಕಣ್ಣಿಟ್ಟಿದ್ದರು. ಸ್ಥಳಕ್ಕೆ ಚಾಮರಾಜನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular