Saturday, April 19, 2025
Google search engine

Homeಅಪರಾಧಪ್ರೀತಿಸಿ, ಮದುವೆಯಾದ ನಂತರ ಇಷ್ಟವಿಲ್ಲವೆಂದ ತಂಗಿ: ಸಹೋದರಿ ತಪ್ಪಿಗೆ ಅಣ್ಣ ಸಾವು

ಪ್ರೀತಿಸಿ, ಮದುವೆಯಾದ ನಂತರ ಇಷ್ಟವಿಲ್ಲವೆಂದ ತಂಗಿ: ಸಹೋದರಿ ತಪ್ಪಿಗೆ ಅಣ್ಣ ಸಾವು

ಮೈಸೂರು: ಶುಕ್ರವಾರ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೌದು ಕೊಲೆಯಾದ ಯುವಕನ ತಂಗಿ, ಆರೋಪಿ ಸಾಗರ್​ ನನ್ನು 5 ವರ್ಷ ಪ್ರೀತಿ ಮಾಡಿ ತಾಳಿ ಕಟ್ಟಿಸಿಕೊಂಡು, ನಂತರ ಇಷ್ಟವಿಲ್ಲ ಎಂದಿದ್ದಳು. ಮದುವೆ ನಂತರವೂ ಪ್ರೀತಿ ಮಾಡಿದವಳು ಸಿಗದ ಕೋಪದಲ್ಲಿ ಸಾಗರ್​ ಜೊತೆಗೆ ತನ್ನ ಸ್ನೇಹಿತರಾದ ಪ್ರತಾಪ್, ಮಂಜು ಎಂಬುವವರು ಸೇರಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ.

ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular