Friday, April 18, 2025
Google search engine

Homeಅಪರಾಧಪ್ರಜ್ವಲ್ ರೇವಣ್ಣ ಕೊಠಡಿಯ ಹಾಸಿಗೆ, ದಿಂಬು, ಹೊದಿಕೆ ವಶಕ್ಕೆ ಪಡೆದ ಎಸ್‌ಐಟಿ

ಪ್ರಜ್ವಲ್ ರೇವಣ್ಣ ಕೊಠಡಿಯ ಹಾಸಿಗೆ, ದಿಂಬು, ಹೊದಿಕೆ ವಶಕ್ಕೆ ಪಡೆದ ಎಸ್‌ಐಟಿ

ಹಾಸನ: ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸಾಗುವ ದಿನಾಂಕ ಸಮೀಪಿಸುತ್ತಿದ್ದಂತೆಯೆ ಎಸ್‌ಐಟಿ ತಂಡ ಹಾಸನದಲ್ಲಿ ಸಾಕ್ಷ್ಯ ಸಂಗ್ರಹವನ್ನು ತೀವ್ರಗೊಳಿಸಿದೆ.

ಹಾಸನದ ಸಂಸದರ ನಿವಾಸದಲ್ಲಿ ಮಂಗಳವಾರ‌ ಮಧ್ಯಾಹ್ನ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಆರಂಭಿಸಿದ್ದ ಪರಿಶೀಲನೆ, ಸಾಕ್ಷ್ಯ ಸಂಗ್ರಹ ಬುಧವಾರ ಬೆಳಗಿನ ಜಾವ 4 ಗಂಟೆಗೆ ಪೂರ್ಣಗೊಂಡಿದೆ. ಸತತ ಹತ್ತು ಗಂಟೆಗಳ ಕಾಲ ಪರಿಶೀಲನೆ ನಡೆಯಿತು.

ಪ್ರಜ್ವಲ್‌‌ ವಿಚಾರಣೆ ವೇಳೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ ತಂಡ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ತಂಡ ವಶಕ್ಕೆ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿತು.

RELATED ARTICLES
- Advertisment -
Google search engine

Most Popular