ಮಂಡ್ಯ: ರಾಜ್ಯದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದಾಗಿದೆ. ಆದರೆ SIT ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಿ ಹೆಣ್ಣುಮಕ್ಕಳಿಗೆ ನ್ಯಾಯಸಿಗಬೇಕು ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ.
ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಮಾಡಿರುವ ಕೃತ್ಯದ ಬಗ್ಗೆ SIT ತನಿಖೆ ನಡೆಸುತ್ತಿದೆ. ಸರ್ಕಾರದ ಡಿಸಿಎಂ ಕೆಲಸಕ್ಕೆ ಬಾರದ ನಾಯಕನನ್ನು ಮುಂದೆ ಇಟ್ಟುಕೊಂಡು ಇವತ್ತು ಲಕ್ಷಾಂತರ ಪೆನ್ ಡ್ರೈವ್ ಮಾಡಿ ಹಂಚಿರುವುದು ಹೆಣ್ಣುಮಕ್ಕಳಿಗೆ ಮಾಡಿರುವ ದೊಡ್ಡ ದ್ರೋಹ ಎಂದರು.
ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ಡಿಸಿಎಂ ನಡೆ ಖಂಡಿಸಿದ್ದೇವೆ. ನಾಳೆ ನಾಗಮಂಗಲದಲ್ಲಿ, ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಉಗ್ರ ಹೋರಾಟ ಮಾಡಲಾಗುವುದು.