Monday, April 21, 2025
Google search engine

Homeಅಪರಾಧಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಶಾಂತ: ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಶಾಂತ: ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಜಿಲ್ಲೆಯ ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿತ್ತು. ಈ ಪ್ರಕರಣ ಸಂಬಂಧ ೨೪ ಜನರ ವಿರುದ್ಧ FIR ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದ್ದಾರೆ.

ಪ್ರಕರಣ ಸಂಬಂಧ ಎಂಟು ಜನರು ತಲೆಮರೆಸಿಕೊಂಡಿದ್ದಾರೆ. ೬೦ ಮಂದಿಯನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಿದ ಮಿಥುನ್ ಕುಮಾರ್, ವಿಡಿಯೋ, ಫೋಟೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಪ್ರಕರಣ ಸಂಬಂಧ ಊಹಾಪೋಹ ಬೇಡ. ವಾಹನ ಯಾರದ್ದು, ವಾಹನದಲ್ಲಿ ಇದ್ದವರು ಯಾರು ಎಂದು ತನಿಖೆ ನಡೆಯುತ್ತಿದೆ. ಅವರನ್ನ ಕರೆತಂದು ವಿಚಾರಣೆ ಮಾಡುತ್ತೇವೆ.

ರಾಗಿಗುಡ್ಡದಲ್ಲಿ ೧೪೪ ಸೆಕ್ಷನ್ ಮುಂದುವರಿಯಲಿದೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಇದ್ದರೂ ವ್ಯಾಪಾರ ವಹಿವಾಟಿಗೆ ಸಮಸ್ಯೆ ಇಲ್ಲ. ಶಿವಮೊಗ್ಗ ನಗರದಲ್ಲಿ ಎಲ್ಲೂ ಕೂಡ ಅಂಗಡಿ ಬಂದ್ ಮಾಡಿಸಿಲ್ಲ. ಯಾರೂ ಭಯಪಡುವ ಅವಶ್ಯಕತೆ ಇಲ್ಲ, ಪೊಲೀಸರ ನಿಯೋಜಿಸಿದ್ದೇವೆ. ರಾಗಿಗುಡ್ಡ ಹೊರತುಪಡಿಸಿ ಶಿವಮೊಗ್ಗ ನಗರದಾದ್ಯಂತ ಸಹಜ ಸ್ಥಿತಿ ಇದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಹಾಕಿದ ಫ್ಲೆಕ್ಸ್‌ನಲ್ಲಿ ತಿದ್ದುಪಡಿ ಮಾಡಬೇಕಿತ್ತು. ಮುಖಂಡರಿಗೆ ಕರೆಕ್ಷನ್ ಮಾಡುವಂತೆ ಹೇಳಿದ್ದೆವು. ಆದರೆ ಅವರು ತಡ ಮಾಡಿದರು. ನಂತರ ಜಿಲ್ಲಾಡಳಿತದ ಕಡೆಯಿಂದ ಅದನ್ನು ಮಾಡಲಾಗಿತ್ತು. ಅದಕ್ಕೂ ಈ ಘಟನೆಗೂ ಸಂಭಂದ ಇಲ್ಲ. ಕಲ್ಲೂ ತೂರಾಟ ಮಾಡಿದವರು ಮೇಲೆ ಕಾನೂನು ಕ್ರಮ ಜರುಗಿಸಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular