Thursday, April 17, 2025
Google search engine

Homeರಾಜ್ಯಸುದ್ದಿಜಾಲಶಿವನಹಳ್ಳಿ ಗ್ರಾ.ಪಂ: 2023-24 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

ಶಿವನಹಳ್ಳಿ ಗ್ರಾ.ಪಂ: 2023-24 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

ಕನಕಪುರ: ಕನಕಪುರ ನರೇಗಾ ಯೋಜನೆ ಕಾಮಗಾರಿ ನಾಮಫಲಕ ಹಾಕಿ ಜಲ್ಲಿ ಮೆಟ್ಲಿಂಗ್ ಮಾಡಿರುವ ರಸ್ತೆಯನ್ನು ಗ್ರಾಮಸ್ಥರು ಓಡಾಡದಂತೆ ಮುಚ್ಚಿದ್ದಾರೆ ಆ ರಸ್ತೆಯನ್ನು ಸಾರ್ವಜನಿಕರು ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಗಡಸ ಹಳ್ಳಿ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಒತ್ತಾಯ ಮಾಡಿದರು.

ತಾಲೂಕಿನ ಕಸಬಾ ಹೋಬಳಿಯ ಶಿವನಹಳ್ಳಿ ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಗಡಸ ಹಳ್ಳಿ ಗ್ರಾಮದ ಅಪ್ಪಾಜಿ ಮತ್ತು ಜವರೇಗೌಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಒತ್ತುವರಿಯಾಗಿರುವ ನಕಾಶೆ ರಸ್ತೆಯಲ್ಲಿ ಜಲ್ಲಿ ಮೆಟ್ಲಿಂಗ್ ಕಾಮಗಾರಿ ಮಾಡುವ ನಾಮಫಲಕ ಹಾಕಿ ಕಾಮಗಾರಿ ಮಾಡಿದ್ದಾರೆ ಆದರೆ ಕಾಮಗಾರಿ ಮಾಡಿದ ನಂತರ ಆ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಬಿಡದೆ ಮುಚ್ಚಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳನ್ನು ಕೇಳಿದರೆ ಈ ಕಾಮಗಾರಿ ನಡೆದಿರುವುದೇ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಯಾವ ಅನುದಾನ ಬಳಸಿ ಜಲ್ಲಿ ಮೆಟ್ಲಿಂಗ್ ಕಾಮಗಾರಿ ನಡೆಸಿದ್ದಾರೆ ಸಾರ್ವಜನಿಕರು ಓಡಾಡದಂತೆ ಆ ರಸ್ತೆಯನ್ನು ಯಾರು? ಏಕೆ? ಮುಚ್ಚಿದ್ದಾರೆ ಇದರ ಬಗ್ಗೆ ನಮಗೆ ಮಾಹಿತಿ ಕೊಡಿ ಜೊತೆಗೆ ಮುಚ್ಚಿರುವ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಜಿಲ್ಲಾ ಲೆಕ್ಕಪರಿಶೋಧನಾಧಿಕಾರಿ ಶ್ರೀನಿವಾಸ ಲೆಕ್ಕಪರಿಶೋಧನಾ ವರದಿ ಮಂಡಿಸಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 845 ಕಾಮಗಾರಿಗಳು ಅನುಷ್ಠಾನಗೊಂಡಿದ್ದು ಸುಮಾರು 1.76 ಕೋಟಿ ಖರ್ಚು ಮಾಡಲಾಗಿದೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ 94 ಜನರಿಗೆ 15 ದಿನಗಳ ಒಳಗೆ ಉದ್ಯೋಗ ಕೊಟ್ಟಿಲ್ಲ ಅವರಿಗೆ ನಿರುದ್ಯೋಗ ಭತ್ಯೆ ಕೊಡಬೇಕು. 9 ಕಾಮಗಾರಿಗಳಿಗೆ ಎಂ ಬಿ ಕೊಟ್ಟಿಲ್ಲ. 190 ಕಾಮಗಾರಿಗಳಿಗೆ ನಾಮಫಲಕಗಳನ್ನೇ ಹಾಕಿಲ್ಲ. 10 ಕಾಮಗಾರಿಗಳ ಕಡತಗಳಲ್ಲಿ ಆರ್ ಟಿ ಸಿ ಇಲ್ಲ. 7 ದನದ ಕೊಟ್ಟಿಗೆ ಕಾಮಗಾರಿಗಳನ್ನು ಒಡೆದು ಹಾಕಿದ್ದಾರೆ ಈ ಕಾಮಗಾರಿಗಳನ್ನು ಮರು ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಹಣ ವಾಪಸ್ ಕಟ್ಟಬೇಕು ಎಂದು ಸೂಚನೆ ನೀಡಿದರು.

136 ಕಾಮಗಾರಿಗಳಿಗೆ ಎನ್ಎಂಆರ್ ಡೌನ್ಲೋಡ್ ಮಾಡಿದ ದಿನವೇ ಹಣ ಪಾವತಿಯಾಗಿದೆ. ಮೂರು ಕಾಮಗಾರಿಗಳಿಗೆ ಫೋಟೋ ಇಲ್ಲ ಜೊತೆಗೆ ಸ್ಥಳದಲ್ಲಿ ಕಾಮಗಾರಿಯೂ ಇಲ್ಲ. 81 ಬದು ಕಾಮಗಾರಿಗಳನ್ನು ಮುಚ್ಚಿ ಹಾಕಿದ್ದಾರೆ. 55 ಕೆಲಸಗಳನ್ನು ಉಪಯೋಗಿಸುತ್ತಿಲ್ಲ. 66 ವೈಯಕ್ತಿಕ ಕಾಮಗಾರಿಗಳಲ್ಲಿ ಫಲಾನುಭವಿಗಳೆ ಕೆಲಸ ಮಾಡಿಲ್ಲ. 23 ಕಾಮಗಾರಿಗಳಲ್ಲಿ ಹೆಚ್ಚುವರಿಯಾಗಿ ಎನ್ಎಂಆರ್ ಹಣ ಪಾವತಿ ಯಾಗಿದೆ. ಕೃಷಿ ಇಲಾಖೆ ರೇಷ್ಮೆ ಇಲಾಖೆ ಅರಣ್ಯ ಇಲಾಖೆ ಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿರುವ ಲೋಪ ದೋಷಗಳನ್ನು ನಿಗದಿತ ಕಾಲಾವಧಿಯಲ್ಲಿ ಸರಿಪಡಿಸಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಹಣ ಮರುಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು

ಪಿಡಿಒ ಕೃಷ್ಣಮೂರ್ತಿ ಮಾತನಾಡಿ. ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಇರುವ ಲೋಪ ದೋಷಗಳನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಮಾಹಿತಿ ನೀಡಿದ್ದಾರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವ ಫಲಾನುಭವಿಗಳು ಕಾಮಗಾರಿಗಳನ್ನು ಒಡೆದು ಹಾಕಿದರೆ ಮರು ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಹಣ ವಾಪಸ್ ಕಟ್ಟಬೇಕು ಹಾಗಾಗಿ ಯಾರು ಸಹ ಕಾಮಗಾರಿಗಳನ್ನು ಒಡೆದು ಹಾಕಬಾರದು ಕೆಲವು ಕಾಮಗಾರಿಗಳಲ್ಲಿ ಒಂದು ಎರಡು ಮತ್ತು ಮೂರು ಹಂತದ ಫೋಟೋಗಳು ಇಲ್ಲ ಅದನ್ನು ಸರಿಪಡಿಸುತ್ತೇವೆ. ಕೆಲವರು ಬದುಗಳನ್ನು ಮುಚ್ಚಿದ್ದಾರೆ ಅವುಗಳನ್ನು ಮರು ನಿರ್ಮಾಣ ಮಾಡಬೇಕು ಅಧಿಕಾರಿಗಳು ಮಂಡಿಸಿರುವ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಕಾಮಗಾರಿಗಳೆಲ್ಲ ಆಗಿರುವ ಲೋಪ ದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಗಡಸಹಳ್ಳಿ ಗ್ರಾಮದಲ್ಲಿ ಜಲ್ಲಿ ಮೆಟ್ಲಿಂಗ್ ಕಾಮಗಾರಿ ನಡೆಸಿ ಮುಚ್ಚಿರುವ ರಸ್ತೆಯ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ರತ್ನಬಾಯಿ, ಮಾಜಿ ಅಧ್ಯಕ್ಷರು,ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular