Sunday, April 20, 2025
Google search engine

Homeರಾಜ್ಯಸುದ್ದಿಜಾಲಕ್ರೀಡಾಕೂಟದಲ್ಲಿ ಸರ್ವೋತ್ತಮ ಪ್ರಶಸ್ತಿಗೆ ಬಾಜನರಾದ ಶಿವನಂಜ ಶೆಟ್ಟಿ

ಕ್ರೀಡಾಕೂಟದಲ್ಲಿ ಸರ್ವೋತ್ತಮ ಪ್ರಶಸ್ತಿಗೆ ಬಾಜನರಾದ ಶಿವನಂಜ ಶೆಟ್ಟಿ

ಮೈಸೂರು: ನ. ೨೯ ,೩೦ ಹಾಗೂ ಡಿ. ೧ರಂದು ೩ ದಿನಗಳ ಕಾಲ ನಡೆದ ೨೦೨೩-೨೪ ನೇ ಸಾಲಿನ ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಮೈಸೂರು ಗ್ರಾಮಾಂತರ ವೃತ್ತದ ವೃತ ನಿರೀಕ್ಷಕ ಶಿವನಂಜಶೆಟ್ಟಿ ರವರು ಅಧಿಕಾರಿ ವರ್ಗದ ಸ್ಪರ್ಧೆಗಳಲ್ಲಿ ಏಳು ಪ್ರಥಮ ಬಹುಮಾನ ಹಾಗೂ ಎರಡು ದ್ವಿತೀಯ ಬಹುಮಾನ ಸರಿ ಒಟ್ಟು ಒಂಬತ್ತು ಪದಕಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದು ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾ ಕೂಟದ ಅಧಿಕಾರಿ ವರ್ಗದವರ ಸರ್ವೋತ್ತಮ ಪ್ರಶಸ್ತಿಗೆ ಬಾಜನರಾಗಿದ್ದಾರೆ .

ಅದು ಅಲ್ಲದೆ ಶಿವನಂಜ ಶೆಟ್ಟಿಯವರು ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಓಪನ್ ಅಂತರರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ ೨೦೨೩ ರಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಹಾಗೂ ಕರ್ನಾಟಕಕ್ಕೆ ಅದರಲ್ಲೂ ಮೈಸೂರಿಗೆ ಹೆಮ್ಮೆಪಡುವಂಥ ಸಾಧನೆಗೈದು ಪೊಲೀಸ್ ಇಲಾಖೆಗೆ ಗೌರವತಂದು ಕೊಟ್ಟಿದ್ದನ್ನು ಗುರುತಿಸಿ ಪ್ರಸಂಶಿಸಿ ಅಡಿಷನಲ್ ಎಸ್ಪಿ ಶ್ರೀಮತಿ ನಂದಿನಿ, ಎಸ್ ಪಿ ಶ್ರೀಮತಿ ಸೀಮಾ ಲಟ್ಕರ್ ಹಾಗೂ ದಕ್ಷಿಣ ವಲಯದ ಐಜಿಪಿ ಶ್ರೀ ಡಾ. ಬೋರ ಲಿಂಗಯ್ಯ ರವರುಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದಾರೆ. ಶ್ರೀ ಶಿವನಂಜ ಶೆಟ್ಟಿ ರವರು ಪಡೆದ ಪದಕಗಳ ವಿವರ ಈ ಕೆಳಗಿನಂತಿವೆ.
ವಾರ್ಷಿಕ ಜಿಲ್ಲಾ ಕ್ರೀಡೆ-೨೦೨೩
೧)೧೦೦ ) ಷಟಲ್ ………………….. ೧ ನೇ
೨) ಫೈರಿಂಗ್ …………………………….೨ ನೇ
೩) ಷಟಲ್ ಸಿಂಗಲ್ಸ್ ………….೧ನೇ
೪)ಷಟಲ್ ಡಬಲ್ಸ್…………೧ನೇ
೫)ಷಟಲ್ ಮಿಶ್ರ ಡಬಲ್ಸ್.೨ನೇ
೬) ಟೆನಿಸ್…………………………..೧ ನೇ
೭)ಶಾಟ್ ಪಟ್…………………….೧ನೇ
೮)ಜಾವೆಲಿನ್ ಎಸೆತ……………..೧ನೇ
೯) ಥ್ರೋ ಅನ್ನು ಚರ್ಚಿಸಿ…………….೧ ನೇ

RELATED ARTICLES
- Advertisment -
Google search engine

Most Popular