Friday, April 4, 2025
Google search engine

Homeಅಪರಾಧಕುಂಭ ಮೇಳಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಗೋಕಾಕ್ ನ ಆರು ಮಂದಿ ಮೃತ

ಕುಂಭ ಮೇಳಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಗೋಕಾಕ್ ನ ಆರು ಮಂದಿ ಮೃತ

ಬೆಳಗಾವಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಗೋಕಾಕ್ ನಿಂದ ತೆರಳುತ್ತಿದ್ದ ವಾಹನವೊಂದು ಸೋಮವಾರ ಮುಂಜಾನೆ ಮಧ್ಯ ಪ್ರದೇಶ ರಾಜ್ಯದಲ್ಲಿ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ(50), ಸುನೀಲ್ ಶೇಡಶ್ಯಾಳೆ(45), ಬಸವರಾಜ ಕುರ್ತಿ(63), ಬಸವರಾಜ ದೊಡಮಾಳ(49), ಈರಣ್ಣ ಶೇಬಿನಕಟ್ಟಿ(27) ಹಾಗೂ ವಿರೂಪಾಕ್ಷ ಗುಮತಿ(61) ಮೃತಪಟ್ಟವರು ಎಂದು ತಿಳಿದುಬಂದಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತೂಫಾನ್ ವಾಹನದಲ್ಲಿ ಇವರು ಗೋಕಾಕ್ ನಿಂದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದರು. ಅವರಿದ್ದ ವಾಹನ ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular