Wednesday, July 23, 2025
Google search engine

Homeರಾಜ್ಯಸುದ್ದಿಜಾಲಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ ನಲ್ಲಿ ಸ್ಕಂದ ಎಂ ಗೆ ಬೆಳ್ಳಿ ಪದಕ

ಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ ನಲ್ಲಿ ಸ್ಕಂದ ಎಂ ಗೆ ಬೆಳ್ಳಿ ಪದಕ

ಚಾಮರಾಜನಗರ: ಚಾಮರಾಜನಗರದ ಸೇವಾ ಭಾರತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸ್ಕಂದ ಎಂ ರವರು ಪಿಂಕಾಕ್ ಸಿಲತ್ ಫೆಡರೇಷನ್ ವತಿಯಿಂದ ಚೆನೈನಲ್ಲಿ ನೆಡೆದ 6ನೇ ಸೌತ್ ಜೊನ್ ಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ 2025-26 ದಲ್ಲಿ ಟ್ಯಾಂಡಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ತುಂಗಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ ಎಂದು ಚಾಮರಾಜನಗರ ಜಿಲ್ಲೆ ಪಿಂಕಾಂಕ್ ಸಿಲತ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ತರಬೇತಿದಾರಾರೂ ಆಗಿರುವ ಕೆ.ಜೆ. ಮುರುಳಿ ತಿಳಿಸಿದ್ದಾರೆ. ಈ ಪಂದ್ಯದ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ ನಲ್ಲಿ ನೆಡೆಯುವ ರಾಷ್ಟ್ರೀಯ ಪಿಂಕಾಂಕ್ ಸಿಲತ್ ಕ್ರೀಡಾಂಗಣದಲ್ಲಿ ಸ್ಕಂದ ಎಂ ಮತ್ತು ಹಿತೈಷಿ ಭಾಗವಹಿಸುತ್ತಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಕಂದ ಎಂ ನನ್ನ ಪೋಷಕರ ಬೆಂಬಲ ಹಾಗೂ ತರಬೇತುದಾರರ ಮಾರ್ಗದರ್ಶನದಿಂದ ಈ ಗೆಲುವು ಲಭಿಸಿದೆ ಎಂದು ತಿಳಿಸಿದರು.

ಸ್ಕಂದನ ಸಾಧನೆಯನ್ನು ಗುರುತಿಸಿ ಅವರ ಸ್ವಗ್ರಾಮ ಕೂಡ್ಲೂರಿನಲ್ಲಿ ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಅಭಿನಂದಿಸಿದರು.
.‌
ಈ ಸಂದರ್ಭದಲ್ಲಿ ಸ್ಕಂದ ಎಂ ರವರ ಪೋಷಕರಾದ ಜ್ಯೊತಿ, ಕೆ.ಆರ್. ಮಂಜು, ಮೈಸೂರು ಜಿಲ್ಲಾ ಪಿಂಕಾಂಕ್ ಸಿಲತ್ ಅಸೋಸಿಯೇಷನ್ ಅಧ್ಯಕ್ಷ ಮಹದೇವ್, ಪಿಂಕಾಂಕ್ ಸಿಲಾತ್ ತರಬೇತುದಾರ ಹಾಗೂ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಕೆ.ಜೆ.‌ ಮುರಳಿ , ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular