ಮೈಸೂರು: ಬೆಂಗಳೂರಿನ ಫೋರ್‍ತ್ ವಾಲ್ ಥಿಯೇಟರ್ ವತಿಯಿಂದ ಫೆ.೧೭ ರಂದು ಸಂಜೆ ನಾಲ್ಕು ಹಾಗೂ ಏಳಕ್ಕೆ ನಗರದ ರಾಮಕೃಷ್ಣ ನಗರದಲ್ಲಿನ ರಮಾಗೋವಿಂದ ಸಭಾಂಗಣದಲ್ಲಿ ಸ್ಕ್ಯೂಡ್ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಲಾವಿದ ಗಂಧರ್ವ ತಿಳಿಸಿದರು.
ಇದು ಸುಮಾರು ೧.೪೦ ಗಂಟೆ ಅವಧಿಯ ನಾಟಕವಾಗಿದ್ದು, ಒಂದು ಕೊಲೆಯ ಸುತ್ತ ನಾಟಕ ಸಾಗುತ್ತದೆ. ಲೇಖಕಿಯ ಪತಿಯಾಗಿದ್ದ ಇನ್‌ಸ್ಪೆಕ್ಟರ್ ಸಾವನ್ನಪ್ಪಿದ ಬಳಿಕ ನಡೆಯುವ ಬಗೆ ಬಗೆಯ ಸಂಗತಿ, ನಿಗೂಢತೆ ನಾಟಕದಲ್ಲಿದೆ. ಪ್ರವೇಶ ದರ ೨೫೦ ರೂ., ಗಳಾಗಿದ್ದು, ಬೆಂಗಳೂರಿನಲ್ಲಿ ಇದುವರೆಗೆ ಕಂಡ ಪ್ರದರ್ಶನ ಭಾರೀ ಯಶಸ್ಸನ್ನು ಗಳಿಸಿವೆ ಎಂದು ಹೇಳಿದರು.