Wednesday, April 16, 2025
Google search engine

Homeರಾಜ್ಯಎಸ್‌ಎಂ ಕೃಷ್ಣ ಅವರು ದಣಿವರಿಯದೇ ಶ್ರಮಿಸಿದ್ದರು: ಪ್ರಧಾನಿ ಮೋದಿ ಸಂತಾಪ

ಎಸ್‌ಎಂ ಕೃಷ್ಣ ಅವರು ದಣಿವರಿಯದೇ ಶ್ರಮಿಸಿದ್ದರು: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಎಸ್‌ಎಂ ಕೃಷ್ಣ ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


ಈ ಸಂಬಂಧ ಎಕ್ಸ್‌ನಲ್ಲಿ ಮೋದಿ ಅವರು ಕೃಷ್ಣ ಅವರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿಡಿ ದ್ದಾರೆ.ಎಸ್.ಎಂ.ಕೃಷ್ಣಾಜಿಯವರು ಅಸಾಧಾರಣ ನಾಯಕ. ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದವರು.
ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದಾರೆ. ಕೃಷ್ಣ ಜೀ ಅವರು ಉತ್ತಮ ಓದುಗ ಮತ್ತು ಚಿಂತಕರೂ ಆಗಿದ್ದರು.

ಎಸ್.ಎಂ.ಕೃಷ್ಣ ಜೀ ಅವರೊಂದಿಗೆ ಸಂವಹನ ನಡೆಸಲು ಅನೇಕ ಅವಕಾಶ ಸಿಕ್ಕಿತ್ತು. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.ಎಸ್‌ಎಂ ಕೃಷ್ಣ ಅವರ ಅನುಪಮ ಸೇವೆಗಾಗಿ ಭಾರತ ಸರ್ಕಾರ ೨೦೨೩ ರಲ್ಲಿಪದ್ಮ ವಿಭೂಷಣ ಗೌರವವನ್ನು ನೀಡಿ ಪುರಸ್ಕರಿಸಿತ್ತು.

RELATED ARTICLES
- Advertisment -
Google search engine

Most Popular