ಮೈಸೂರು, ಜೂ.25, 2025: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್ಸಿ)ದ ಆದೇಶದಂತೆ ಚಾಮಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ವ್ಯಾಪ್ತಿಯಲ್ಲಿ 2025ರ ಜುಲೈ 1ರಿಂದ ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ (HT ಹೊರತುಪಡಿಸಿ) ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸೆಸ್ಕ್ ನಿಗದಿಪಡಿಸಿರುವ ದರದಲ್ಲಿ ರೀಟೇಲ್ ಔಟ್ಲೆಟ್ಗಳಲ್ಲಿ ಸ್ಮಾರ್ಟ್ ಮೀಟರ್ಗಳನ್ನು ಖರೀದಿಸಿ, ವಿದ್ಯುತ್ ಸಂಪರ್ಕ ಪಡೆಯಬೇಕಿದೆ ಎಂದು ಸೆಸ್ಕ್ನ ಐಟಿ ಮತ್ತು ಎಂಐಎಸ್ ವಿಭಾಗದ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.27ರಂದು ಗ್ರಾಹಕರ ಸಭೆ:
ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿರುವ ಕುರಿತು ಗ್ರಾಹಕರಿಗೆ ಅರಿವು ಮೂಡಿಸಲು ಜೂ.27ರಂದು ಬೆಳಗ್ಗೆ 11.30ಕ್ಕೆ ನಿಗಮ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಆಸಕ್ತ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಸ್ಮಾರ್ಟ್ ಮೀಟರ್ ಅನುಷ್ಠಾನದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.