ಧಾರವಾಡ: ಮನುಷ್ಯನ ಮಾನಸಿಕ ಸ್ಥೈರ್ಯವನ್ನು ಆಧರಿಸಿ ವ್ಯಕ್ತಿಯ ಮತ್ತು ಸಮಾಜವು ನಿಂತಿದೆ. ವ್ಯಕ್ತಿಯ ಮುಖದಲ್ಲಿನ ನಗು, ಸಂತಸ, ನಗುವೇ ಆತನ ಆಭರಣಗಳಂತೆ ಕಾಣುವುದು ಆತನ ಮಾನಸಿಕ ಸ್ವಾಸ್ಥ್ಯ ಹಾಗೂ ಶುದ್ಧ ಭಾವನೆಗಳ ಪ್ರತೀಕವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಪರಶುರಾಮ ದೊಡ್ಡಮನಿ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಿಮ್‌ಹಾನ್ಸ್, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯುವ ವಾಹಿನಿಯ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ಘೋಷಣೆಯಡಿ ಜನಜಾಗೃತಿ ಮೇಳ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಧಾರವಾಡ ಮಾನಸಿಕ ಆರೋಗ್ಯ ಮತ್ತು ನ್ಯೂರೋಸೈನ್ಸ್ ಇನ್ಸ್ಟಿಟ್ಯೂಟ್ (ಡಿಮ್ಹಾನ್ಸ್) ಹಾಲ್ ಮಾನವ ಸಮಾಜದ ಅಳಿವು ಮತ್ತು ಉಳಿವು ಮಾನವನ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಪ್ರತಿಯೊಬ್ಬರಲ್ಲೂ ದಯೆ, ಧರ್ಮ ಮತ್ತು ಪರಸ್ಪರ ವಾತ್ಸಲ್ಯದಿಂದ ಇಡೀ ಸಮಾಜವೇ ಮಾದರಿಯಾಗುತ್ತದೆ. ವ್ಯಕ್ತಿಯಲ್ಲಿನ ಮಾನವೀಯತೆಯು ಮಾನಸಿಕ ಆರೋಗ್ಯದ ಸೂಚಕವಾಗಿದೆ, ನಮ್ಮ ಮನಸ್ಸು ಸಾಧಿಸುವ ಮಾರ್ಗವಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಅಧಿಕಾರ ಮತ್ತು ಸ್ಥಾನಮಾನವನ್ನು ಮೀರಿ ತೋರಿಸಬೇಕು. ಇದರಿಂದ ವೃತ್ತಿ ಬಾಂಧವ್ಯ ಮತ್ತು ವೈಯಕ್ತಿಕ ಸಂಬಂಧಗಳು ಗಟ್ಟಿಯಾಗುತ್ತವೆ ಎಂದರು. ಮಾನಸಿಕ ಕಾಯಿಲೆ ಸಮಾಜಕ್ಕೆ ಮಾರಕ. ಅದು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತದೆ. ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಹಾಗಾಗಿ ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು.
ಕಳೆದ 18 ತಿಂಗಳಲ್ಲಿ 10,000 ಕ್ಕೂ ಹೆಚ್ಚು ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ಘೋಷಿಸಲಾಗಿದೆ. ದಂಪತಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಯುವಕರಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಟೆಲಿಮಾನಸ ದೂರವಾಣಿ ಪರಿಶೀಲನಾ ಕೇಂದ್ರಕ್ಕೆ ನಿತ್ಯ 40ರಿಂದ 50ಕ್ಕೂ ಹೆಚ್ಚು ಕರೆಗಳು ದಕ್ಷತೆಯಿಂದ, ಸಮರ್ಪಕವಾಗಿ ನಿಭಾಯಿಸಲು ನುರಿತ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೇಘಮಾಲಾ ತಾವರಗಿ ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿಧರ್ ಬಿ.ಕಳಸೂರಮುತ್ತು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲ ಸೋಮಶೇಖರ್ ಜಾಡರ್ ಸೇರಿದಂತೆ ಡಿಮ್ಹಾನ್ಸ್ ಸಿಬ್ಬಂದಿ, ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಮಾನಸಿಕ ರೋಗಿಗಳ ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು. ಕಾಲ್ನಡಿಗೆ ಜಾಥಾ: ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಪಿ. ಎಫ್.ದೊಡ್ಡಮನಿ, ಡಿಎಚ್ ಒ ಡಾ.ಶಶಿ ಪಾಟೀಲ ಉದ್ಘಾಟಿಸಿದರು. ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜರ್ಮನ್ ಆಸ್ಪತ್ರೆಯ ಮೂಲಕ ಡಿಮ್ಹಾನ್ಸ್‌ಗೆ ಮರಳಿತು.
