Saturday, April 19, 2025
Google search engine

Homeಸ್ಥಳೀಯಅನಗತ್ಯ ಭಯದಿಂದ ಹಾವುಗಳನ್ನು ಸಾಯಿಸಲಾಗುತ್ತಿದೆ

ಅನಗತ್ಯ ಭಯದಿಂದ ಹಾವುಗಳನ್ನು ಸಾಯಿಸಲಾಗುತ್ತಿದೆ


ಮೈಸೂರು: ಹಾವುಗಳ ಬಗ್ಗೆ ಅನಗತ್ಯ ಭಯದಿಂದ ಅವುಗಳನ್ನು ಸಾಯಿಸಲಾಗುತ್ತಿದೆ. ಎಲ್ಲ ಹಾವುಗಳು ವಿಷಕಾರಿಯಲ್ಲ ಎಂದು ಉರಗ ರPಕ ಸ್ನೇಕ್ ಶ್ಯಾಮ್ ಹೇಳಿದರು.
ನಗರದ ಜೆಎಲಬಿ ರಸ್ತೆಯ ಇಂಜಿನಿಯರಿಂಗ್ ಸಂಸ್ಥೆಯ ಮುಂಭಾಗ ಕೆಎಂಪಿಕೆ ಚಾರಿಟೇಬಲ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ಆಶ್ರಯದಲ್ಲಿ ಸೋಮವಾರ ಹಾವುಗಳ ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಹಾವು, ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆ ಹಾವು, ಹಸಿರು ಹಾವು ಮುಂತಾದವು ವಿಷಕಾರಿಯಲ್ಲ. ಕೆಲವು ಹಾವುಗಳು ಹೆಚ್ಚು ವಿಷಕಾರಿಯಲ್ಲದಿದ್ದರೂ, ಹಪ್ಪಟೆ ಹಾವು ಕಚ್ಚಿದರೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವುಗಳ ಬಗ್ಗೆ ಅನಗತ್ಯ ಭಯ ಬೇಡ ಎಂದು ಸಲಹೆ ನೀಡಿದರು.
ಹಾವು ಕಚ್ಚಿದಾಗ ಬಹುತೇಕ ಜನರು ಭಯದಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಬೇಕು ಮತ್ತು ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಅರಣ್ಯ ಇಲಾಖೆ ಪರಿಸರ ಹಾಗೂ ವನ್ಯಜೀವಿಗಳ ಸಂರPಣೆಗೆ ಮುಂದಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯP ವಿಕ್ರಂ ಅಯ್ಯಂಗಾರ್ ಮಾತನಾಡಿ, ಕೋವಿಡ್‌ನಂತಹ ಕಷ್ಟಕಾಲದಲ್ಲೂ ಮನೆಗಳಿಗೆ ಬಂದ ಹಾವುಗಳನ್ನು ಸ್ನೇಕ್ ಶ್ಯಾಮ್ ಸಂರಕ್ಷಿಸಿzರೆ. ೮೬ ಸಾವಿರಕ್ಕೂ ಹೆಚ್ಚು ಹಾವನ್ನು ಸಂರಕ್ಷಿಸಿzರೆ. ಪರಿಸರ ಸಂರPಣೆ ಜೊತೆಯ ಧಾರ್ಮಿಕ ಕೇಂದ್ರ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ರPಕ ಸ್ನೇಕ್ ಶ್ಯಾಮ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಜಿ.ರಾಘವೇಂದ್ರ, ಎಸ್.ಎನ್.ರಾಜೇಶ್, ರಾಕೇಶ್, ಪ್ರಸನ್ನ, ಬೈರತಿ ಲಿಂಗರಾಜು, ಹರೀಶ್ ನಾಯ್ಡು, ರವಿಚಂದ್ರ, ದುರ್ಗಾ ಪ್ರಸಾದ್, ಗಿರೀಶ್, ರಾಮಮೂರ್ತಿ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular