Friday, April 4, 2025
Google search engine

Homeಕ್ಯಾಂಪಸ್ ಕಲರವಸ್ನೇಹ ಅನ್ನೋದು ನಂಬಿಕೆಯ ಬ್ಯಾಂಡ್:ಇದು ಸ್ನೇಹೋತ್ಸವದ ಸಂಭ್ರಮ

ಸ್ನೇಹ ಅನ್ನೋದು ನಂಬಿಕೆಯ ಬ್ಯಾಂಡ್:ಇದು ಸ್ನೇಹೋತ್ಸವದ ಸಂಭ್ರಮ

ಕೆಲವರು ಸ್ನೇಹವನ್ನು ತಮ್ಮ- ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವರು, ದಯವಿಟ್ಟು ಅದನ್ನು ಮಾಡಬೇಡಿ, ಒಬ್ಬರ ಭಾವನೆ, ನಂಬಿಕೆಯ ಜೊತೆ ಆಟವಾಡಬಾರದು. ಸ್ನೇಹ ಮಾಡುವಾಗ ಯೋಚಿಸಿ ಸ್ನೇಹ ಮಾಡಿ, ಸಜ್ಜನರ ಜೊತೆ ಸ್ನೇಹವಿದ್ದರೆ ಹೆಜ್ಜೇನು ಸವಿದಂತಿರುತ್ತದೆ. ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

ಚೇತನ
2023 ಆಗಸ್ಟ್ 6 ರಂದು ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗಾದರೆ ಸ್ನೇಹ ಅಂದರೇನು? ನಿಜವಾದ ಸ್ನೇಹಿತರು ಯಾರು? ಜೀವನದಲ್ಲಿ ಸ್ನೇಹಕ್ಕೆ ಇರುವ ಪ್ರಾಮುಖ್ಯತೆ..?
ಸ್ನೇಹ ಎಂಬುದು ಕೇವಲ ಎರಡು ಅಕ್ಷರದ ಪದವಲ್ಲ. ಆ ಪದಗಳಲ್ಲಿ ಅಗಾಧವಾದ ಪ್ರೀತಿ, ನಂಬಿಕೆ, ಗೌರವ, ಸಂತೋಷ ಎಂಬ ಎಷ್ಟೋ ಭಾವನೆಗಳು ತುಂಬಿವೆ. ಸ್ನೇಹಿತರ ದಿನ ಕೇವಲ ಒಂದೇ ದಿನಕ್ಕೆ ಮೀಸಲಲ್ಲಾ, ಸ್ನೇಹವನ್ನು ಪ್ರತಿದಿನ ಸಂಭ್ರಮಿಸಬೇಕು.ಸ್ನೇಹಕ್ಕೆ ವಯಸ್ಸಿನ ಮಿತಿ ಇಲ್ಲ, ಲಿಂಗ ಭೇದವಿಲ್ಲ, ಜಾತಿಯ ಹಂಗಿಲ್ಲ, ಅದಕ್ಕೆ ಈ ಸಂಬಂಧ ಪವಿತ್ರವಾದದ್ದು.ಸ್ನೇಹಿತರು ಒಬ್ಬರ ಬೆನ್ನಿಗೆ ಒಬ್ಬರು ಬೆನ್ನೆಲುಬಾಗಿ ನಿಲ್ಲಬೇಕೇ ಹೊರತು ಬೆನ್ನಿಗೆ ಚೂರಿ ಹಾಕಬಾರದಲ್ಲವೇ, ಒಬ್ಬರ ಸಂಭ್ರಮವನ್ನು ಮತ್ತೊಬ್ಬರು ಸಂಭ್ರಮಿಸಬೇಕೆ ಹೊರೆತು ಹೊಟ್ಟೆ ಕಿಚ್ಚು ಪಡಬಾರದು. ಜೀವನಕ್ಕೆ ಒಬ್ಬ ಸಂಗಾತಿಯು ಹೇಗೋ ಹಾಗೆ ಗೆಳೆತನವು ಮುಖ್ಯ.

ಒಬ್ಬ ಸ್ನೇಹಿತ ಅಣ್ಣ, ಅಪ್ಪ, ಅಕ್ಕ, ತಂಗಿ ಎಲ್ಲವು ಆಗಬಲ್ಲ ಶಕ್ತಿ ಇರುತ್ತದೆ. ಸ್ನೇಹಿತರು ಕನ್ನಡಿಯಹಾಗೆ ಇರಬೇಕು, ನಾವು ಅತ್ತಾಗ ನಮ್ಮೊಡನೆ ಅಳಬೇಕು, ನಕ್ಕಾಗ ನಗಬೇಕು, ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಇದಲ್ಲವೇ ನಿಜವಾದ ಸ್ನೇಹ. ಸ್ನೇಹಿತರ ದಿನದಂದು ದಾರದ ಒಂದು ಬ್ಯಾಂಡ್ ಕಟ್ಟುವುದಲ್ಲ ಮುಖ್ಯ, ನಂಬಿಕೆ ಎಂಬ ಬ್ಯಾಂಡನ್ನು ಮನಸ್ಸುಗಳ ನಡುವೆ ಕಟ್ಟಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸ್ನೇಹಕ್ಕೆ ಇರುವ ಪ್ರಾಮುಖ್ಯತೆ ಮರೆಯಾಗುತ್ತಿದೆ, ಸ್ನೇಹ ಎಂದರೆ ಕೊಟ್ಟು ತೆಗದುಕೊಳ್ಳುವ ರೀತಿ ಆಗಿದೆ, ಈದಿನ ನಾನು ನಿನಗೆ ಏನೋ ಕೊಡಿಸಿದೆ, ಮರುದಿನ ನೀನು ಕೂಡ ಕೊಡಿಸಬೇಕು, ಇಲ್ಲವಾದಲ್ಲಿ ನಾನು ಮತ್ತೊಮ್ಮೆ ಏನನ್ನು ನಾನು ಕೊಡಿಸಲು ಸಿದ್ದವಿಲ್ಲ ಎನ್ನುವ ಹಾಗೆ.

ಇಂದಿನ ಯುವಜನರ ಸ್ನೇಹದಲ್ಲಿ ನಂಬಿಕೆಯ ಕೊರತೆ ಬಹಳ ಇದೆ, ಸ್ನೇಹಿತ ತಪ್ಪು ಮಾಡಿದಾಗ ಕಪಾಳಕ್ಕೆ ತಾಯಿಯ ರೀತಿ ಹೊಡೆದು ಸರಿ ದಾರಿಗೆ ತರುವವನೆ ಸ್ನೇಹಿತ, ಅದನ್ನು ಬಿಟ್ಟು ಕೆಟ್ಟ ಕೆಲಸದಲ್ಲಿ ಸಹಾಯ ಮಾಡಿ ಕೈಜೋಡಿಸುವವನು ಸ್ನೇಹಿತ ಎಂಬ ಪದಕ್ಕೆ ಅನರ್ಹ. ಜೊತೆಯಲ್ಲಿ ಇದ್ದಾಗ ಎಲ್ಲವು ಚನ್ನಾಗಿದ್ದಾಗ ಖುಷಿಯಾಗಿದು ನಂತರ ಜೊತೆಯಲ್ಲಿ ಎಲ್ಲದಿರುವಾಗ ಬೆನ್ನಿಂದೆ ಅವಹೇಳನ ಮಾತುಗಳು, ನಮ್ಮ ಬಗ್ಗೆ ಕೆಟ್ಟ ಆಲೋಚನೆ ಮಾಡುವವರೇ ಇಂದಿನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸಿಗುತ್ತಾರೆ. ನಾವು ಮಾತನಾಡಲಿ ಅಥವಾ ಇಲ್ಲದಿರಲಿ, ಮನಸಿನಲ್ಲಿರುವ ಪ್ರೀತಿ, ಗೌರವ ಕುಂದಬಾರದು. ಮನಸ್ಸಿನಲ್ಲಿರುವ ಎಷ್ಟೋ ವಿಷಯಗಳನ್ನು ಮನೆಯವರ ಬಳಿ ಹೇಳಿಕೊಳ್ಳಲಾಗದೆ ಇರುವಾಗ ಮೊದಲು ನಾವು ಓಡುವುದೇ ಸ್ನೇಹಿತರ ಬಳಿ, ಎಲ್ಲವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇವೆ. ಕೆಲವರು ಸ್ನೇಹವನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ಬಲಿಸುಕೊಳ್ಳುವರು, ದಯವಿಟ್ಟು ಅದನ್ನು ಮಾಡಬೇಡಿ, ಒಬ್ಬರ ಭಾವನೆ, ನಂಬಿಕೆಯ ಜೊತೆ ಆಟವಾಡಬಾರದು. ಸ್ನೇಹ ಮಾಡುವಾಗ ಯೋಚಿಸಿ ಸ್ನೇಹ ಮಾಡಿ, ಸಜ್ಜನರ ಜೊತೆ ಸ್ನೇಹವಿದ್ದರೆ ಹೆಜ್ಜೇನು ಸವಿದಂತಿರುತ್ತದೆ. ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

RELATED ARTICLES
- Advertisment -
Google search engine

Most Popular