ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮಿಂಚಿದ ನಟಿ ಮೇಘಾ ಶೆಟ್ಟಿ ಆ ಧಾರಾವಾಹಿ ಮುಗಿಸಿ ಈಗ ಸಿನಿಮಾ ದತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಫುಲ್ ಟೈಂ ಸಿನಿಮಾ ಎಂದು ಹೇಳಿದ್ದ ನಟಿ ಈಗ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸಖತ್ ಕಲರ್‌ಫುಲ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಹೊಸ ಸಿನಿಮಾಕ್ಕೆ ರೆಡಿಯಾಗುತ್ತಿದ್ದಾರೆ.
ಈಗಾಗಲೇ ಸಿನಿಮಾಕ್ಕೆ ಒಂದಷ್ಟು ತಯಾರಿಗಳನ್ನೂ ಮಾಡಿಕೊಳ್ಳುತ್ತಿರುವ ಮೇಘಾ ಶೆಟ್ಟಿ, “ಈಗ ಸಿನಿಮಾ ಮಾಡಬಹುದಾದ ಒಂದಷ್ಟು ಒಳ್ಳೆಯ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ ಇನ್ನೂ ಯಾವುದನ್ನೂ ಫೈನಲ್ ಮಾಡಿಲ್ಲ. ಸದ್ಯಕ್ಕೆ ನಾನು ಈಗಾಗಲೇ ಅಭಿನಯಿಸಿರುವ “ಕೈವ’ ಮತ್ತು “ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿಯೇ ಈ ಎರಡೂ ಸಿನಿಮಾಗಳು ಬಿಡುಗಡೆಯಾಗಲಿವೆ. ಇದರ ನಡುವೆ ಸಿನಿಮಾಗಳಿಂದಲೂ ಒಂದಷ್ಟು ಆಫರ್ ಬರುತ್ತಿದ್ದು, ಅವುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇನೆ’ ಎನ್ನುತ್ತಾರೆ.