ವರದಿ : ಎಡತೊರೆ ಮಹೇಶ್
ಹೆಚ್ ಡಿ ಕೋಟೆ : ತಾಲೂಕಿನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಸಮಾಜ ಸೇವಕಿ ಹಾಗೂ ಮಹಿಳಾ ಹೋರಾಟಗಾರ್ತಿ ಜ್ಯೋತಿ ಅವರು ಇತರರಿಗೂ ಮಾದರಿಯಾಗುವ ರೀತಿಯಲ್ಲಿ ಬಹಳ ಸರಳವಾಗಿ ಹೆಚ್. ಡಿ .ಕೋಟೆ ಪಟ್ಟಣದಲ್ಲಿರುವ ಬುದ್ಧಿಮಾಂದ್ಯ ಆಶ್ರಮದಲ್ಲಿ (ಚಿತ್ತಧಾಮ) ತಮ್ಮ ಹುಟ್ಟುಹಬ್ಬ ಸಂಭ್ರಮ ಆಚರಿಸಿಕೊಂಡರು.

ಇದೇ ವೇಳೆ ಮಾತನಾಡಿದ ಅವರು ನನ್ನ ಜೀವನದಲ್ಲೇ ನನ್ನ ಕುಟುಂಬದಲ್ಲೇ ಆದ ಅನ್ಯಾಯವನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆಲ್ಲ ಅಲೆದಾಡಿರುವುದು ನನ್ನ ಜೀವನದಲ್ಲಿ ನಡೆದಿದೆ. ಆದರೆ ಅದನ್ನೆಲ್ಲ ಮೆಟ್ಟಿನಿಂತು ತಾಲೂಕಿನಾದ್ಯಂತ ಮಹಿಳೆಯರಿಗೆ ತಮ್ಮ ತಮ್ಮ ಕುಟುಂಬದಲ್ಲಿ ಆಗುವಂತಹ ಅನ್ಯಾಯ, ಮಹಿಳೆಯರಿಗೆ ಹೊರಗಡೆಯಿಂದ ಆಗುವಂತ ಕಿರುಕುಳ ಎಲ್ಲವನ್ನು ನೋಡಿದಾಗ ಇವರ ಸಮಸ್ಯೆ ಮುಂದೆ ನನ್ನ ಸಮಸ್ಯೆ ಯಾವುದು ದೊಡ್ಡದಲ್ಲ ಅನಿಸಿತು. ನಾನು ಅಂದೇ ತೀರ್ಮಾನ ಮಾಡಿದೆ ನನ್ನ ಕೈಲಾದಷ್ಟು ಇವರ ಸೇವೆ ಮಾಡಲೇಬೇಕು ಎಂದು ಪಣತೊಟ್ಟೆ. ನನ್ನ ಜೀವ ಇರುವವರೆಗೂ ಮಹಿಳೆಯರಿಗೆ ಅನ್ಯಾಯಕ್ಕೆ ಒಳಗಾಗುವುದನ್ನು ನನ್ನ ಗಮನಕ್ಕೆ ಬಂದರೆ ನಾನು ಸಹಿಸುವುದಿಲ್ಲ. ಈ ಸೇವೆ ನನ್ನ ಉಸಿರಿರುವ ತನಕ ಸಂಬಂಧಪಟ್ಟ ಇಲಾಖೆಯ ವಿಶ್ವಾಸ ಪಡೆದು ಅವರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬುದ್ಧಿಮಾಂದ್ಯದವರಿಂದ ಜ್ಯೋತಿಯವರಿಗೆ ಪ್ರಾರ್ಥನೆ ಮಾಡಲಾಯಿತು. ಆಶ್ರಮದಲ್ಲಿ ಬುದ್ಧಿಮಾಂದ್ಯದವರ ಜೊತೆಗೂಡಿ ಕೇಕ್ ಕತ್ತರಿಸಿ ಆಶ್ರಮದಲ್ಲಿ ಇರುವ ಎಲ್ಲರಿಗೂ ಸಿಹಿ ಊಟ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ಕೆ ಆಶ್ರಮ ವ್ಯವಸ್ಥಾಪಕ ಮಹಾದೇವಸ್ವಾಮಿ ಅವರಿಗೆ ಜ್ಯೋತಿಯವರು ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅನುಷಾ. ಕಾಳಪ್ಪಾಜಿ ಆದಿವಾಸಿ ಮುಖಂಡ ನಟರಾಜ್ . ಕರ್ನಾಟಕ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ (ಹೂವಿನ ಕೊಳ) ಮಣಿಕಂಠ .ಸವಿತಾ ಸಮಾಜದ ಮುಖಂಡ ಮಹೇಶ್ ಪತ್ರಕರ್ತ ಮಲಾರ ಮಹದೇವಸ್ವಾಮಿ ಹಾಗೂ ಪುರುಷೋತ್ತಮ್ ಮತ್ತು ಆಶ್ರಮ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



