ಚನ್ನಪಟ್ಟಣ: ದೇಶ ರಕ್ಷಣೆಗೆ ತಾಲೂಕಿನ ಕೊಡುಗೆ ಅಪಾರವಾಗಿದ್ದು ನಿವೃತ್ತ ಯೋಧರಾದ ಗಿರೀಶ್ ಮತ್ತು ವಿಜಯ್‌ಕುಮಾರ್‌ಅವರು ತಾಲೂಕಿನ ಹೆಮ್ಮೆಯಾಗಿದ್ದಾರೆ ಎಂದು ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಬಣ್ಣಿಸಿದರು.
ತಾಲೂಕಿನ ಕಳ್ಳಿಹೊಸೂರು ಗ್ರಾಮದಲ್ಲಿ ರೈತಕುಟುಂಬದಲ್ಲಿ ಜನಿಸಿ ದೇಶ ಸೇವೆಗೆ ಜೀವದ ಹಂಗನ್ನು ತೊರೆದು ಸೇವೆ ಮಾಡಿ ನಿವೃತ್ತಿಯಾಗಿ ತಾಲೂಕಿಗೆ ಆಗಮಿಸಿದ ವೀರ ಸೈನಿಕರಾದ ಗಿರೀಶ್ ಮತ್ತು ವಿಜಯ್‌ಕುಮಾರ್‌ಅವರನ್ನು ಕಳ್ಳಿಹೊಸೂರು ಗ್ರಾಮಸ್ಥರು ಪಟ್ಟಣದ ರೈಲ್ವೇ ನಿಲ್ದಾಣದಿಂದ ತೆರೆದ ವಾಹನದಲ್ಲಿ ಡೊಳ್ಳುಕುಣಿತದ ಭವ್ಯ ಮೆರವಣಿಗೆಯಲ್ಲಿ ಕರೆತಂದ ವೇಳೆ ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಸೈನಿಕರಿಗೆ ಎಳನೀರು ನೀಡಿ ಹೂಮಾಲೆ ಹಾಕಿ ಅಭಿನಂದಿಸಿದ ಬಳಿಕ ಅವರು ಮಾತನಾಡಿ, ದೇಶದ ರಕ್ಷಣೆಗೆ ತನ್ನ ಕುಟುಂಬವನ್ನು ತ್ಯಜಿಸಿ ಪ್ರಾಣದ ಹಂಗನ್ನು ತೊರೆದು ಹೋರಾಟ ಮಾಡಿರುವ ನಿಮ್ಮ ಸೇವೆ ಶ್ಲಾಘನೀಯವಾಗಿದೆ. ಕಾರ್ಗಿಲ್ ಯುದ್ದದ ವೇಳೆ ಸೇವೆ ಮಾಡಿ ಪ್ರಾಣದ ಹಂಗು ತೊರೆದು ದೇಶ ರಕ್ಷಣೆಗೆ ಶ್ರಮಿಸಿರುವ ವಿಜಯ್‌ಕುಮಾರ್‌ಅವರು ಹಾಗೂ ದೇಶದ ಗಡಿಭಾಗದಲ್ಲಿ ವಿವಿಧ ಭಾಗದಲ್ಲಿ ಗಡಿರಕ್ಷಣೆಗೆ ಶ್ರಮಿಸಿರುವ ಗಿರೀಶ್‌ಅವರು ದೇಶಪ್ರೇಮ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಬಣ್ಣಿಸಿದರು.
ಬಳಿಕ ಸೈನಿಕರನ್ನು ತೆರೆದ ಜೀಪ್‌ನಲ್ಲಿ ಗಾಂಧಿಭವನದವರೆಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಮಂಗಳಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಸಾಂಸ್ಕೃತಿಕ ಘಟಕದ ರ‍್ಯಾಂಬೋ ಸೂರಿ, ತಾಲ್ಲೂಕು ಉಪಾಧ್ಯಕ್ಷ ಸತೀಶ್ ಮಂಗಳವಾರಪೇಟೆ, ಪುರಿ ಸಿದ್ದು, ಗೋಬಿ ಪ್ರಭಾಕರ್, ತಿಟ್ಟಮಾರನಹಳ್ಳಿ ಟಿ.ಎಸ್. ನಾಗೇಂದ್ರ, ಟಿ.ಇ. ರಾಜೇಂದ್ರ, ಕಳ್ಳಿಹೊಸೂರಿನ ಮಧುಸೂದನ್, ಲೋಕೇಶ್ (ಸಾಯಿಬಬಾ), ಕುಮಾರ್, ರಮೇಶ್, ಹರೀಶ್, ರಾಜೇಂದ್ರ ಸೇರಿದಂತೆ ಅನೇಕರು ಉಪಸ್ಥಿರಿದ್ದರು.