ಹೊಸೂರು: ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸೋಮನಹಳ್ಳಿ ಜಗದೀಶ್ ಉಪಾಧ್ಯಕ್ಷರಾಗಿ ಸುಧಾಶಂಕರಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾದರು
ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಗದೀಶ್ ಅವರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಧಾಶಂಕರಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು
ಅಧ್ಯಕ್ಷ ಸ್ಥಾನವು ಎ ,,ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್ ಸಿ ಮಹಿಳೆಗೆ ಮೀಸಲಾಗಿತ್ತು, ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಕಾರ್ಯನಿರ್ವಹಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೇಸ್ ಮುಖಂಡರಾದ ಚಿಬುಕಹಳ್ಳಿ ಬಸವರಾಜು,ಕೆಸ್ತೂರುಕೊಪ್ಪಲು ಧನರಾಜ್, ನ್ಯಾಯಬೆಲೆ ಶಿವಕುಮಾರ್, ರವಿನಾಮದಾರಿ ತಾಪಂ ಮಾಜಿ ಸದಸ್ಯರಾದ ಚಿಕ್ಕೇಗೌಡ,ಸಣ್ಣಪ್ಪಾಜಿಗೌಡ, ಕೆಸ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸೋಮಶೇಖರ್, ಹೊಸಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರತ್ನಮ್ಮಚಂದ್ರೇಗೌಡ, ಚಿಬುಕಹಳ್ಳಿ ಸೊಸೈಟಿ ಮಾಜಿ ಅಧ್ಯಕ್ಷ ವೆಂಕಟೇಶ್ ಮುಖಂಡರಾದ ಸೋಮನಹಳ್ಳಿ ಚಂದ್ರೇಗೌಡ,ಮಹದೇವು, ಪುಟ್ಟರಾಜು, ಪುನೀತ, ವೆಂಕಟಶ್, ಪುನೀತ, ಪಾಟೀಲ್ ಸೇರಿದಂತೆ ಮತ್ತಿತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು
ಚುನಾವಣಾ ಸಭೆಯಲ್ಲಿ ಸದಸ್ಯರಾದ ಮಲ್ಲಿಕಾರ್ಜುನ, ಪ್ರಸನ್ನ, ಪುನೀತ, ಪಾಪಣ್ಣ, ಗಿರಿಜಮ್ಮ, ಮಂಗಳಾ ರಮೇಶ್ , ರತ್ನಮ್ಮ, ಕಮಲಮ್ಮ, ಶೋಭಾರಾಣಿ, ದೇವೇಂದ್ರ, ರೇಖಾರಮೇಶ್ ಪಿಡಿಒ ಮೊಹಮದ್ ಇಸ್ಹಾಕ್, ಕಾರ್ಯದರ್ಶಿ ಪ್ರೇಮಚಂದ್ರ ಹಾಜರಿದ್ದರು.