ಎಡತೊರೆ ಮಹೇಶ್
ಎಚ್.ಡಿ. ಕೋಟೆ : ಆದಿವಾಸಿ ಮುಖಂಡ ಸೋಮಣ್ಣ ರವರಿಗೆ ಮಹರ್ಷಿ ವಾಲ್ಮೀಕಿ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿರುವುದು ತಾಲೂಕಿಗೆ ಹೆಮ್ಮೆ ತಂದಿರುವ ವಿಚಾರ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಹರ್ಷದ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಆದಿವಾಸಿ ಮುಖಂಡ ಸೋಮಣ್ಣ ರವರಿಗೆ ಎಚ್ ಡಿ ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಕುರಿತು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾ ಗ್ರಂಥವನ್ನು ರಚಿಸಿದಂತ ಮಹಾನ್ ವ್ಯಕ್ತಿಯ ಹೆಸರಿನಲ್ಲಿರುವ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯು ಮೊತ್ತ ಆಡಿಯ ಆದಿವಾಸಿ ಮುಖಂಡ ಸೋಮಣ್ಣರವರಿಗೆ ದೊರಕಿರುವುದು ತಾಲೂಕು ಹೆಮ್ಮೆ ಪಡುವ ಸಂಗತಿಯಾಗಿದೆ.

ಸೋಮಣ್ಣನವರ ಆದಿವಾಸಿಗಳ ಸಂಘಟನೆ ಮಾಡುವ ನಿಟ್ಟಿನಲ್ಲಿ ಅಪಾರ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅಭಿವೃದ್ಧಿಗೆ ಆದಿವಾಸಿಗಳ ಅಭಿವೃದ್ಧಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಿರುವುದನ್ನ ಗುರುತಿಸಿ ಹಾಗೂ ಆದಿವಾಸಿಗಳಿಗೆ ಜಮೀನು ದೊರಕಿಸಿ ಕೊಡುವಲ್ಲಿ ಸತತ ಪ್ರಯತ್ನ ಸೇರಿದಂತೆ ಇನ್ನುಳಿದ 10 ಹಲವು ಪರಿಣಾಮಕಾರಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಡಿದ ಹಿನ್ನೆಲೆ ಇಂತಹ ಪ್ರಶಸ್ತಿ ಅವರಿಗೆ ದೊರಕಿದೆ ಎಂದರು.
ಅಭಿನಂದನೆ ಸ್ವೀಕರಿಸಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಮಾತನಾಡಿ, ನಾನು ಬಡತನ ರೇಖೆಗಿಂತ ಕೆಳ ಇರುವ ಕುಟುಂಬದಲ್ಲಿ ಜನಿಸಿ ಬಾಲ್ಯದಿಂದಲೇ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಬೆಳೆದ ಹಿನ್ನೆಲೆಯಲ್ಲಿ ನನಗೆ ಆದಿವಾಸಿಗಳ ಕಷ್ಟ ಕಾರ್ಪಣ್ಯಗಳು ಹಂತ ಹಂತವಾಗಿ ಅರಿವು ಮೂಡಿತು. ಆ ಹಿನ್ನೆಲೆಯಲ್ಲಿ ನಾನು ಆದಿವಾಸಿಗಳ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚು ಒತ್ತನ್ನ ನೀಡಿದಿನಿ ಎಂದರು,
ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಉಪಾಧ್ಯಕ್ಷ ಮಹೇಶ, ಪ್ರಧಾನ ಕಾರ್ಯದರ್ಶಿ ನಾಗರಾಮ, ಸಹ ಕಾರ್ಯದರ್ಶಿ ದೊಡ್ಡ ಸಿದ್ದು ಖಜಾಂಚಿ ಮಂಜು ಕೋಟೆ, ನಿರ್ದೇಶಕರುಗಳಾದ ರೇಣುಕಾ ರವಿ ಆರಾಧ್ಯ ಪುಟ್ಟರಾಜು, ಹಂಪಾಪುರ ನಾಗೇಶ ಜಿ. ರವಿಕುಮಾರ್, ರಂಗರಾಜು ಸದಸ್ಯರುಗಳಾದ ಎಚ್.ಪಿ. ಬಸವರಾಜ್, ಕನ್ನಡ ಪ್ರಮೋದ್, ನಂದಕುಮಾರ್ ಶೈಲಿ, ಶ್ರೀನಿಧಿ, ಪುರುಷೋತ್ತಮ, ಶರವಣ, ಚಂದ್ರು ಇದ್ದರು.