Friday, April 11, 2025
Google search engine

Homeರಾಜ್ಯವಯನಾಡ್‌ನ ಕೆಲವು ಪ್ರದೇಶಗಳು ಜನವಸತಿಗೆ ಯೋಗ್ಯವಲ್ಲ : ಕೇರಳ ಸರ್ಕಾರ

ವಯನಾಡ್‌ನ ಕೆಲವು ಪ್ರದೇಶಗಳು ಜನವಸತಿಗೆ ಯೋಗ್ಯವಲ್ಲ : ಕೇರಳ ಸರ್ಕಾರ

ಕೇರಳ: ಭಾರಿ ಭೂಕುಸಿತದಿಂದ ವಯನಾಡ್‌ನ ಕೆಲವು ಪ್ರದೇಶಗಳ ಸ್ಥಳಾಕೃತಿಯ ಮೇಲೆ ಆಗಿರುವ ತೀವ್ರ ಸ್ವರೂಪದ ಪರಿಣಾಮದಿಂದಾಗಿ ವಯನಾಡ್ ಜಿಲ್ಲೆಯ ಕೆಲವು ಭೂಕುಸಿತಕ್ಕೀಡಾಗಿರುವ ಪ್ರದೇಶಗಳನ್ನು ಜನವಸತಿ ರಹಿತ ವಲಯಗಳನ್ನಾಗಿ ಘೋಷಿಸಬೇಕಾಗಬಹುದು ಎಂದು ಕೇರಳ ಸರಕಾರದ ಪ್ರಾಧಿಕಾರಗಳು ಆತಂಕ ವ್ಯಕ್ತಪಡಿಸಿವೆ.
ಜುಲೈ ೩೦ರ ಭೂಕುಸಿತದ ನಂತರ ಬದುಕುಳಿದಿರುವವರು ಭೀತಿಗೊಳಗಾಗಿದ್ದು, ಈ ಪೈಕಿ ಹಲವಾರು ಮಂದಿ ತಮ್ಮ ನಿವಾಸಗಳಿಗೆ ಮರಳದಿರಲು ನಿರ್ಧರಿಸಿದ್ದಾರೆ. ಅವರೆಲ್ಲ ತಮ್ಮ ಪರ್ಯಾಯ ಸೂರು, ಪರಿಹಾರ ಹಾಗೂ ಬದುಕಿನ ಕುರಿತು ಕಳವಳಗೊಂಡಿದ್ದಾರೆ ಎಂದು ವರದಿಯಾಗಿದೆ.

ಭೂಕುಸಿತದಿಂದ ತೀವ್ರ ಹಾನಿಗೀಡಾಗಿರುವ ಮೇಪ್ಪಾಡಿ ಪಂಚಾಯತ್ ಅಡಿಯ ಪುಂಚಿರಿಮಟ್ಟಂ, ಚೂರಲ್ ಮಲ ಹಾಗೂ ಮುಂಡಕ್ಕೈನ ಪೈಕಿ ಮೊದಲೆರಡು ಗ್ರಾಮಗಳಲ್ಲಿ (ವಾರ್ಡ್ ಸಂಖ್ಯೆ ೧೦, ೧೧ ಹಾಗೂ ೧೨) ಭವಿಷ್ಯದಲ್ಲಿ ಜನವಸತಿ ಸಾಧ್ಯಮವಾಗಲಾರದು ಎಂದು ಎಂದು ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಹೇಳುತ್ತಾರೆ.
ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಂಡಿರುವ ಮತ್ತೊಬ್ಬ ಅಧಿಕಾರಿ ಕೂಡಾ ಇದೇ ಆತಂಕವನ್ನು ವ್ಯಕ್ತಪಡಿಸಿದ್ದು, ಭಾರಿ ಗಾತ್ರದ ಕಲ್ಲುಗಳು, ಜಲ್ಲಿಕಲ್ಲು ಹಾಗೂ ಉರುಳಿ ಬಿದ್ದಿರುವ ಮರಗಳನ್ನು ಹೊತ್ತುಕೊಂಡು ಉಕ್ಕೇರಿ ಮತ್ತು ಅಗಲವಾಗಿ ಹರಿಯುತ್ತಿರುವ ಗಾಯತ್ರಿ ನದಿಯು, ತಮ್ಮ ಮಾರ್ಗದಲ್ಲಿರುವ ಎಲ್ಲ ಮನೆಗಳು, ಶಾಲೆಗಳು, ದೇವಾಲಯಗಳು ಹಾಗೂ ಇನ್ನಿತರ ಸಾರ್ವಜನಿಕ ಮೂಲಸೌಕರ್ಯಗಳನ್ನು ನಾಶಗೊಳಿಸಿರುವುದರಿಂದ, ಈ ಪ್ರದೇಶದ ಸ್ಥಳಾಕೃತಿಯು ಶಾಶ್ವತವಾಗಿ ರೂಪಾಂತರಗೊಂಡಿದೆ ಎಂದು ಹೇಳುತ್ತಾರೆ. ಹಾನಿಗೀಡಾಗಿರುವ ಪ್ರದೇಶಗಳ ಸ್ಥಳೀಯರೂ ಇದೇ ಬಗೆಯ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular