Friday, April 11, 2025
Google search engine

Homeಸಿನಿಮಾ “ಸಪ್ತ ಸಾಗರದಾಚೆ ಎಲ್ಲೋ” : ಎರಡು ಭಾಗದ‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ರಕ್ಷಿತ್ ಶೆಟ್ಟಿ

 “ಸಪ್ತ ಸಾಗರದಾಚೆ ಎಲ್ಲೋ” : ಎರಡು ಭಾಗದ‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ರಕ್ಷಿತ್ ಶೆಟ್ಟಿ

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರತಂಡ ಇತ್ತೀಚೆಗೆ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ಎನ್ನುವುದನ್ನು ಹೇಳಿತ್ತು. ಇದೀಗ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸಿನಿಮಾದ ಕುರಿತು ಬಿಗ್‌ ಅಪ್ಡೇಟ್‌ ವೊಂದನ್ನು ನೀಡಿದ್ದಾರೆ.

ಈಗಾಗಲೇ ಸ್ಯಾಂಡಲ್‌ ವುಡ್‌ ನಲ್ಲಿ ತನ್ನ ವಿಭಿನ್ನ ಕಂಟೆಂಟ್‌ ಮೂಲಕ ಸಿನಿ ರಸಿಕರ ಮನ ಗೆದ್ದಿರುವ ಹೇಮಂತ್‌ ರಾವ್‌ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

“ಸಪ್ತ ಸಾಗರದಾಚೆ ಎಲ್ಲೋ” ಚಿತ್ರ ಎರಡು ಭಾಗವಾಗಿ ತೆರೆ ಮೇಲೆ ಬರಲಿದೆ. ಸೈಡ್‌ 1, ಸೈಡ್‌ 2  ಆಗಿ  ತೆರೆ ಕಾಣಲಿದೆ ಎಂದು ಟೀಸರ್‌ ಮೂಲಕ ಚಿತ್ರ ತಂಡ ನಾಯಕ ನಟನ ಹುಟ್ಟುಹಬ್ಬದ ದಿನದಂದು ಟೀಸರ್‌ ಮೂಲಕ ಹೇಳಿತ್ತು. ಇದೀಗ ನಟ ರಕ್ಷಿತ್‌ ಶೆಟ್ಟಿ ಸಿನಿಮಾದ ರಿಲೀಸ್‌ ಡೇಟ್‌ ನ್ನು ರಿವೀಲ್‌ ಮಾಡಿದ್ದಾರೆ.

“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸೈಡ್‌ 1 ಅಂದರೆ ಮೊದಲ ಭಾಗ ಸೆಪ್ಟೆಂಬರ್ 1 ರಂದು ರಿಲೀಸ್‌ ಆಗಿಲಿದೆ ಸೈಡ್‌ 2 (ಭಾಗ-2)  ಅಕ್ಟೋಬರ್ 20 ರಂದು ರಿಲೀಸ್‌ ಆಗಲಿದೆ ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮನು- ಸುರಭಿ ಪ್ರೇಮಯಾನ, ಎರಡನೇ ಭಾಗದಲ್ಲಿ ನೋವಿನಲ್ಲಿ ಉಳಿದ ಮನುವಿನ ಕಥೆ ಸಿನಿಮಾದಲ್ಲಿ ಇರಲಿದೆ.

ರಕ್ಷಿತ್‌ ಶೆಟ್ಟಿಯೊಂದಿಗೆ ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular