ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಪುರಭವನದಲ್ಲಿ 5.11.2023ರಂದು ನಡೆದ “ಮನಃಶಾಂತಿಗಾಗಿ ಹಾಡು” ಕಾರ್ಯಕ್ರಮ ವಿಶ್ವ ದಾಖಲೆ ಸಾಧಕರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಆ ಪ್ರಯುಕ್ತ ಸಾಧಕರಿಗೆ ಅಭಿನಂದನಾ ಸಮಾರಂಭವು ಇದೇ ಬರುವ 23ನೇ ಶುಕ್ರವಾರ 2024 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಆಯೋಜಕ ಗಂಗಾಧರ ಗಾಂಧಿ ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಈ ಕಾರ್ಯಕ್ರಮವನ್ನು ಚಲನಚಿತ್ರ ನಟ ಅರವಿಂದ ಬೋಳಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು NSCDF ಅಧ್ಯಕ್ಷ ಗಂಗಾಧರ ಗಾಂಧಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಸತೀಶ್ ಬಂದಲೆ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, NSCDF ಅಂತರಾಷ್ಟ್ರೀಯ ವಕ್ತಾರೆ ಮಮ್ರಾ ರಾವ್, ಸಾಮಾಜಿಕ ಕಾರ್ಯಕರ್ತೆ ಭಾಗಿರಥಿ ಬಿ.ಕೆ. NSCDF ಕಾರ್ಯದರ್ಶಿ ದಿನಕರ ಡಿ.ಬಂಗೇರ ಭಾಗವಾಹಿಸಲಿದ್ದಾರೆ. ಅಂದು ವಿಶ್ವ ದಾಖಲೆ ನಿರ್ಮಿಸಿದ ಗಾಯಕರಿಗೆ ಸನ್ಮಾನ ಹಾಗೂ ಗೌರವ ವಂದನೆ ನಡೆಯಲಿದೆ ಎಂದರು.