Friday, April 18, 2025
Google search engine

Homeಸ್ಥಳೀಯಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲೆಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲೆಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಅನಾರೋಗ್ಯಕ್ಕೀಡಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಮೈಸೂರಿನ ಹೂಟಗಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕುಮಾರಸ್ವಾಮಿ ಅವರು ರೈತರ, ಜನಸಾಮಾನ್ಯರ ಪರವಾಗಿರುವ ರಾಜಕಾರಣಿ. ಅವರ ಆರೋಗ್ಯ ಬೇಗ ಸುಧಾರಣೆ ಕಂಡು ಜನಸೇವೆ ಮಾಡಬೇಕು ಎಂದು ಈ ವೇಳೆ ಮುಖಂಡರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪೂಜೆ ವೇಳೆ ಹೂಟಗಳ್ಳಿ ಗ್ರಾಮದ ಯುವ ಮುಖಂಡರಾದ ಶರತ್.ವಿ.ಗೌಡ, ರಾಜೇಶ್ ಗೌಡ, ನಂದನ್,ಅರುಣ್, ಮನು,ಮಂಜು, ಧ್ರುವ ಸೇರಿದಂತೆ ಹಲವರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular