ಹನೂರು: ಭೀಮನ ಅಮಾವಾಸ್ಯೆ ಹಿನ್ನಲೆ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ಆಕರ್ಷಣೆಯ ಅಲಂಕಾರ ಮಾಡಿದ್ದು, ವಿಶೇಷ ಪೂಜೆ ಸಲ್ಲಿಸಲಾಗಿದೆ.
ಭೀಮನ ಅಮಾವಾಸೆ ದಿನವಾದ ಇಂದು ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದ ಹೊರಗಾಂಣ ಹಾಗೂ ಗರ್ಭಗುಡಿಯನ್ನು ಕ್ಯಾರೆಟ್, ಬದನೆಕಾಯಿ ದ್ರಾಕ್ಷಿ ಸೇರಿ ವಿವಿಧ ಫಲ ಪುಷ್ಪಗಳು ಇತರ ತರಕಾರಿಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಇನ್ನು ಈ ಅಲಂಕಾರ ದೇವರ ದರ್ಶನಕ್ಕೆ ಬರುವ ಭಕ್ತರ ಕಣ್ಮನ ಸೆಳೆಯುವಂತಾಗಿದ್ದಲ್ಲದೆ ಹಲವು ಭಕ್ತರು ದೇವಾಲಯದ ಸೌಂದರ್ಯವನ್ನು ಕಂಡು ಪುಳಿಕಿತರಾದರು
ಅಲ್ಲದೆ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ರಾಜೂಜಿರಾವ್,ಅರುಣ್,ಜಯಂತ್ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಅರ್ಚನೆ, ಸೇರಿ ಇತರ ವಿಧಿ, ವಿಧಾನಗಳು ಜರುಗಿದವು.
ಅಲ್ಲದೆ ದೇವಿಗೆ ಆಗಮಿಸಿದ ಮಹಿಳೆಯರು ಬೆಲ್ಲ ಮತ್ತು ನಿಂಬೆಹಣ್ಣಿನ ಆರತಿ ಬೆಳಗಿದರು.
