ಬಾಗಲಕೋಟೆ: ಕ್ಷತ್ರಿಯ ಭಾವಸಾರ ಸಮಾಜದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಅಧಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಾಗಲಕೋಟ ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಡಾ.ಶೇಖರ್ ಮಾನೆ ನೇತೃತ್ವದಲ್ಲಿ ಹೊನ್ನಾಕಟ್ಟಿ ಮರಾಠಾ ಸಮಾಜದ ಅಧ್ಯಕ್ಷ ವಾಸುದೇವ ಜಾಧವ್ ಮುಖಂಡರೂ ಪಾಲ್ಗೊಂಡಿದ್ದರು.

ನಂತರ ದೇವಿ ಆಶೀರ್ವಾದ ಪಡೆದು ಪ್ರಸಾದವನ್ನು ಸ್ವೀಕರಿಸಿದರು.
ತುಂಬಾ ಅಚ್ಚುಕಟ್ಟಾಗಿ ಮತ್ತು ಭವ್ಯ ಧಾರ್ಮಿಕ ಕಾರ್ಯಕ್ರಮ ಸಂಘಟಿಸಿದ ಕ್ಷತ್ರೀಯ ಭಾವಸಾರ ಸಮಾಜದ ಮುಖಂಡರಿಗೆ, ಕ್ಷತ್ರೀಯ ಮರಾಠಾ ಸಮಾಜದ ಪರವಾಗಿ ಹಾಗೂ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಪರವಾಗಿ ಜಿಲ್ಲಾ ಸಂಚಾಲಕ ಡಾ ಶೇಖರ್ ಮಾನೆ ಮೆಚ್ಚುಗೆ ಮತ್ತು ಅಭಿನಂದನೆ ಸಲ್ಲಿಸಿದರು.