ಸರಗೂರು: ತಾಲೂಕಿನ ಅಧಿದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಶುಕ್ರವಾರದಿಂದ ಚಿಕ್ಕದೇವಮ್ಮ ದೇವಿಗೆ ಆಷಾಢಮಾಸದ ವಿಶೇಷ ಪೂಜೆ ಶುರುವಾಗಿದ್ದು, ದೇವಿಗೆ ರಾಜೋಪಚಾರ ಪೂಜೆ ವಿಜೃಂಭಣೆಯಿಂದ ನಡೆಯಿತು.
ದೇವಿಯನ್ನು ಹೂವಿನಿಂದ ಅಲಂಕಾರಗೊಳಿಸಿ, ಬೆಳಗ್ಗೆ ೬ ಗಂಟೆಯಿಂದಲೇ ಪೂಜೆ ನೆರೆವೇರಿಸಲಾಯಿತು. ಮೊದಲಿಗೆ ಅಭಿಷೇಕದೊಂದಿಗೆ ಪೂಜೆ ಆರಂಭವಾಯಿತು. ರುದ್ರಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು ದೇವಿಯ ಕೃಪೆಗೆ ಪಾತ್ರರಾದರು. ಕೆಲವರು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿ ಪುನೀತರಾದರು.
ಆಷಾಢ ಮಾಸದ ದಿನ, ವಿಶೇಷ ಪೂಜೆ ಸಂದರ್ಭಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ತಾಲೂಕು ಆಡಳಿತ ಬಸ್ ಸೌಲಭ್ಯ ಒದಗಿಸಿದ್ದರೆ ತುಂಬಾ ಪ್ರಯೋಜನವಾಗುತ್ತಿತ್ತು. ಆದರೆ, ಬಸ್ ಸೌಲಭ್ಯ ಇಲ್ಲದರಿಂದ ಖಾಸಗಿ ವಾಹನಗಳಲ್ಲಿ ಭಕ್ತರು ಬೆಟ್ಟಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಿದ್ದರು. ಇದಲ್ಲದೆ ಸರಗೂರು ಪಟ್ಟಣದ ಚೌಡೇಶ್ವರಿ ದೇವಸ್ಥಾನ, ಸಂತೆ ಮಾಸ್ತಮ್ಮನ ದೇವಸ್ಥಾನ, ಕಾಳಮ್ಮತಾಯಿ ದೇವಸ್ಥಾನಗಳಲ್ಲಿ ಆಷಾಢ ಮಾಸದ ವಿಶೇಷ ಪೂಜೆ ನೆರವೇರಿತು.
ದೇವಸ್ಥಾನದ ಪಾರುಪತ್ತೇ ದಾರರಾದ ಮಹದೇವಸ್ವಾಮಿ, ಆರ್ಚಕರಾದ ನಾಗಣ್ಣ, ಚಿಕ್ಕದೇವಣ್ಣಉಪ್ಪಿ, ರವಿ, ಪ್ರಸನ್ನ, ಮಣಿ, ಶ್ರೀಂಠಪ್ರಸಾದ್, ಮಂಜು,ರಘು, ಸೇರಿದಂತೆ ದೇವಸ್ಥಾನದ ಸಿಬ್ಬಂದಿಗಳು ಹಾಜರಿದ್ದರು.