ಮೈಸೂರು: ಮೈಸೂರು ದಸರಾ ಹಿನ್ನೆಲೆ ರಾಜ್ಯ, ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ನಾಡಹಬ್ಬ ದಸರಾಗೆ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಘೋಷಿಸಿದೆ.
ರೈಲು ನಂ. ೦೬೨೭೯/೦೬೨೮೦ ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಅನ್ ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್‌ಗಳನ್ನು ಮಾಡಲಿದೆ. ರೈಲು ನಂ. ೦೬೨೭೯ ಅಕ್ಟೋಬರ್ ೨೦, ೨೧, ೨೨, ೨೩ ಮತ್ತು ೨೪ ರಂದು ರಾತ್ರಿ ೧೧.೧೫ ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ ೨.೩೦ ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ. ರೈಲು ನಂ. ೦೬೨೮೦ ಕೆಎಸ್‌ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ. ೨೧, ೨೨, ೨೩, ೨೪ ಮತ್ತು ೨೫ ರಂದು ಬೆಳಿಗ್ಗೆ ೩ ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೬.೧೫ ಕ್ಕೆ ಮೈಸೂರು ತಲುಪಲಿದೆ.
ರೈಲು ನಂ. ೦೬೫೯೭/೦೬೫೯೮ ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಅನ್‌ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್‌ಗಳನ್ನು ಮಾಡುತ್ತದೆ. ರೈಲು ನಂ. ೦೬೫೯೭ ಮೈಸೂರಿನಿಂದ ಅಕ್ಟೋಬರ್ ೨೦, ೨೧, ೨೨, ೨೩ ಮತ್ತು ೨೪ ರಂದು ಮಧ್ಯಾಹ್ನ ೧೨.೧೫ ಕ್ಕೆ ಹೊರಟು ಮಧ್ಯಾಹ್ನ ೩.೩೦ ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸುತ್ತದೆ. ರೈಲು ನಂ. ೦೬೫೯೮ ಕೆಎಸ್‌ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ. ೨೦, ೨೧, ೨೨, ೨೩ ೨೪ ರಂದು ಮಧ್ಯಾಹ್ನ ೩.೪೫ ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ರಾತ್ರಿ ೭.೨೦ ಕ್ಕೆ ಮೈಸೂರಿಗೆ ತಲುಪಲಿದೆ. ರೈಲು ನಂ. ೦೬೨೮೧/೦೬೨೮೨ ಮೈಸೂರು-ಚಾಮರಾಜನಗರ-ಮೈಸೂರು ಅನ್‌ರಿಸರ್ವ್ಡ್ ಸ್ಪೆಷಲ್ ಒಂದು ಟ್ರಿಪ್ ಮಾಡಲಿದೆ.
ರೈಲು ನಂ. ೦೬೨೮೧ ಮೈಸೂರು-ಚಾಮರಾಜನಗರ ವಿಶೇಷ ರೈಲು ಅ, ೨೪ ರಂದು ರಾತ್ರಿ ೧೧.೩೦ ಕ್ಕೆ ಮೈಸೂರಿನಿಂದ ಹೊರಟು ೧.೧೫ ಕ್ಕೆ ಚಾಮರಾಜನಗರ ತಲುಪುತ್ತದೆ. ರೈಲು ನಂ. ೦೬೨೮೨ ಚಾಮರಾಜನಗರ-ಮೈಸೂರು ವಿಶೇಷ ರೈಲು ಅ. ೨೫ ರಂದು ಸಂಜೆ ೫ ಗಂಟೆಗೆ ಚಾಮರಾಜನಗರದಿಂದ ಹೊರಟು ಬೆಳಿಗ್ಗೆ ೬.೫೦ ಕ್ಕೆ ಮೈಸೂರು ತಲುಪುತ್ತದೆ. ರೈಲು ನಂ. ೦೬೨೮೩/೦೬೨೮೪ ಮೈಸೂರು-ಚಾಮರಾಜನಗರ-ಮೈಸೂರು ಪ್ರವಾಸಕ್ಕೆ ಕಾಯ್ದಿರಿಸಿದೆ. ರೈಲು ನಂ. ೦೬೨೮೩ ಮೈಸೂರಿನಿಂದ ಅ. ೨೪ ರಂದು ರಾತ್ರಿ ೯.೧೫ ಕ್ಕೆ ಹೊರಟು ರಾತ್ರಿ ೧೧.೧೦ ಕ್ಕೆ ಚಾಮರಾಜನಗರ ತಲುಪಲಿದೆ. ರೈಲು ನಂ. ೦೬೨೮೪ ಚಾಮರಾಜನಗರ-ಮೈಸೂರು ವಿಶೇಷ ರೈಲು ಅ. ೨೪ ರಂದು ರಾತ್ರಿ ೧೧.೩೦ ಕ್ಕೆ ಚಾಮರಾಜನಗರದಿಂದ ಹೊರಟು ಬೆಳಗ್ಗೆ ೧.೩೦ಕ್ಕೆ ಮೈಸೂರು ತಲುಪುತ್ತದೆ.