Thursday, April 24, 2025
Google search engine

Homeಸ್ಥಳೀಯಚಾಮರಾಜ ಜೋಡಿ ರಸ್ತೆಯಲ್ಲಿ ಡಾ ರಾಜ್ ಕುಮಾರ್ ಪ್ರತಿಮೆಗೆ ವಿಶೇಷ ಪೂಜೆ

ಚಾಮರಾಜ ಜೋಡಿ ರಸ್ತೆಯಲ್ಲಿ ಡಾ ರಾಜ್ ಕುಮಾರ್ ಪ್ರತಿಮೆಗೆ ವಿಶೇಷ ಪೂಜೆ

ಮೈಸೂರು: ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ವರನಟ ಡಾಕ್ಟರ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಡಾಕ್ಟರ್ ರಾಜ್ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಿಸಿದರು.

ನಂತರ ಮಾತನಾಡಿದ ಮಯೂರ ಕನ್ನಡ ಯುವಕರ ಬಳಗದ ಜಿ ರಾಘವೇಂದ್ರ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಡಾ. ರಾಜಕುಮಾರ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟದ ಸ್ಪೂರ್ತಿಯಾದರು, ಅದರ ಫಲವಾಗಿ ಕನ್ನಡ ಭಾಷೆಗೆ ಎಲ್ಲೆಡೆ ಪ್ರಧಾನ ಸ್ಥಾನ ದೊರೆಯಲು ಸಾಧ್ಯವಾಯಿತು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಡಾಕ್ಟರ್ ರಾಜ್ ತಮ್ಮ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಜನಪ್ರಿಯಗೊಳಿಸಿದರು, ಸಾಮಾಜಿಕ ಬದಲಾವಣೆಯಲ್ಲಿ ಅವರ ಚಲನಚಿತ್ರಗಳು ಪ್ರಮುಖ ಪಾತ್ರವಹಿಸಿದೆ ಎಂದರು.

ಮಯೂರ ಕನ್ನಡ ಯುವಕರ ಬಳಗದ ಜಿ ರಾಘವೇಂದ್ರ, ಕಿಶೋರ್ ಕುಮಾರ್, ಎಸ್ ಎನ್ ರಾಜೇಶ್, ಸುಬ್ರಮಣ್ಯ( ಸುಬ್ಬು), ಮಂಜುನಾಥ್, ಚಕ್ರಪಾಣಿ, ಲಕ್ಷ್ಮಣ, ರವಿಚಂದ್ರ, ಮುಸಿರ, ಹರೀಶ್ ನಾಯ್ಡು, ಕಿರಣ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular