ಕೊಡಗು: ಕೊಡಗಿನಲ್ಲಿ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ನಡೆದ ಆಫ್ ರೋಡ್ ರ್ಯಾಲಿ ಪ್ರೇಕ್ಷರ ಮೈರೋಮಾಂಚನಗೊಳಿಸಿತು.
ಕೂರ್ಗ್ ಚಾಲೆಂಜರ್ಸ್ ಅಸೋಸಿಯೇಷನ್ ವತಿಯಿಂದ ರ್ಯಾಲಿ ಆಯೋಜನೆ ಮಾಡಲಾಗಿದ್ದು, ಗೋಣಿಕೊಪ್ಪಲುವಿನಲ್ಲಿ ರ್ಯಾಲಿಗೆ ಚಾಲನೆ ನೀಡಲಾಯಿತು.
ರಾಷ್ಟ್ರಮಟ್ಟದ ಆಫ್ ರೋಡ್ ರ್ಯಾಲಿಯಲ್ಲಿ 50 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.
ಎಂಟು ಎಕರೆ ಗದ್ದೆ ಪ್ರದೇಶದಲ್ಲಿ ಎರಡು ದಿನ ಸಾಹಸ ರ್ಯಾಲಿ ನಡೆಯಿತು. ಕ್ಷಣ ಕ್ಷಣಕ್ಕೂ ರೋಚಕತೆ ಮೂಡಿಸಿತು.