ಮೈಸೂರು: ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಮೈಸೂರು ವಿಶ್ವಮಾನವ ಕುವೆಂಪು ಸಹಯೋಗದಲ್ಲಿ ವಾಕ್ (ಮಾತು) ಮತ್ತು ಶ್ರವಣ(ಕಿವಿ) ದೋಷವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಇಲವಾಲ ಹೋಬಳಿಯ ಮಲ್ಲೇಗೌಡನಕೊಪ್ಪಲು ವೃತ್ತದ ಬಳಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲೆ 317 ಜಿಯ 1ನೇ ಉಪ ಜಿಲ್ಲಾ ರಾಜ್ಯಪಾಲರಾದ ಲಯನ್ ಎನ್ ಸುಬ್ರಹ್ಮಣ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾಗರಾಜೇಗೌಡ, ಆನಂದೂರು ಗ್ರಾಪಂ ಅಧ್ಯಕ್ಷ ವೈ.ಎಸ್.ಶ್ರೀನಿವಾಸ್, ಉಪಾಧ್ಯಕ್ಷೆ ಅನುರಾಧ ಉಮೇಶ್, ಸದಸ್ಯರಾರ ಪ್ರಕಾಶ್, ಮಹದೇವು ಪಾಲ್ಗೊಂಡಿದ್ದರು.
ಕೆ.ಆರ್.ಎಸ್. ಬ್ಯಾಕ್ ವಾಟರ್ ನ ಬ್ಲೂ ಲಗೂನ್ ಇನ್ ರೆಸಾರ್ಟ್ ನಲ್ಲಿ ಅಕ್ಟೋಬರ್ ತಿಂಗಳ ಮಾಸಿಕ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು. ಹಾಗೆಯೇ ಇಬ್ಬರು ಹೊಸ ಸದಸ್ಯರು ಲಯನ್ಸ್ ಸಂಸ್ಥೆಗೆ ಸೇರ್ಪಡೆಗೊಂಡರು.