Saturday, April 19, 2025
Google search engine

Homeರಾಜ್ಯಸುದ್ದಿಜಾಲಕ್ರೀಡೆ ವಿದ್ಯಾರ್ಥಿಜೀವನದಲ್ಲಿ ಬಹಳ ಮುಖ್ಯ :ಡಾ. ಯತೀಂದ್ರ ಸಿದ್ದರಾಮಯ್ಯ

ಕ್ರೀಡೆ ವಿದ್ಯಾರ್ಥಿಜೀವನದಲ್ಲಿ ಬಹಳ ಮುಖ್ಯ :ಡಾ. ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ವಿದ್ಯಾರ್ಥಿಜೀವನದಲ್ಲಿಕ್ರೀಡೆಯು ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯುಯಾವುದಾದರೊಂದು ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ವರುಣಾಕ್ಷೇತ್ರದ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ನಂಜನಗೂಡಿನಲ್ಲಿ ಶಿಕ್ಷಣ ಇಲಾಖೆವತಿಯಿಂದ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದತಾಲ್ಲೂಕು ಮಟ್ಟದಕ್ರೀಡಾಕೂಟವನ್ನುಗುಂಡುಎಡೆಯುವ ಮುಖಾಂತರ ಉದ್ಘಾಟಿಸಿ ಮಾತನಾಡಿದಅವರು, ಕ್ರೀಡೆಎಂದರೆ ಸಾಮೂಹಿಕ ಚಟುವಟಿಕೆಯಾಗಿದ್ದು, ನಾವೆಲ್ಲರುಒಂದೇ ಎಂಬ ಮನೋಭಾವ ಬೆಳೆಯುತ್ತದೆ ವಿದ್ಯಾರ್ಥಿಗಳಲ್ಲಿ ಸಮಚಿತ್ತ ಭಾವ ಬರಬೇಕಾದರೆಕ್ರೀಡೆ ಬಹಳಮುಖ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವುದರೊಂದಿಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದಅವರು, ವರುಣಾಕ್ಷೇತ್ರದ ಮಕ್ಕಳ ಸರ್ವತೋಮುಖಅಭಿವೃದ್ಧಿಗೆಅಗತ್ಯವಿರುವಎಲ್ಲಾ ಕೆಲಸಗಳನ್ನು ಮಾಡಿಕೊಡಲು ಸಿದ್ದರಿದ್ದೇವೆ. ನಂಜನಗೂಡುತಾಲ್ಲೂಕಿನ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲೂ ಉನ್ನತ ಸ್ಥಾನಕ್ಕೆ ಬರಲಿ ಎಂದರು.
ಶಾಸಕ ದರ್ಶನ್‌ಧ್ರುವನಾರಾಯಣ್ ಮಾತನಾಡಿ ನಾನು ಕೂಡಟೆನ್ನಿಸ್‌ನಲ್ಲಿರಾಜ್ಯಮಟ್ಟದಕ್ರೀಡಾಪಟುವಾಗಿದ್ದೆ. ಕ್ರೀಡೆಎಲ್ಲಾಜನಾಂಗದ, ಎಲ್ಲಾ ಜಾತಿಗಳ ಮಕ್ಕಳನ್ನು ಜಾತಿ ಭೇದ ಮರೆತುಒಗ್ಗೂಡಿಸುವ ವೇದಿಕೆಯಾಗಿದ್ದು, ಶಿಕ್ಷಣದ ಜೊತೆಗೆಕ್ರೀಡೆಯಲ್ಲಿಎಲ್ಲರೂ ಭಾಗವಹಿಸಿ ರಾಜ್ಯ ಮತ್ತುರಾಷ್ಟಮಟ್ಟದಲ್ಲಿಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಶಿವಪ್ರಸಾದ್, ಜಿ.ಪಂ. ಮಾಜಿಅಧ್ಯಕ್ಷ ಎಸ್.ಸಿ. ಬಸವರಾಜು, ಕೆ. ಮಾರುತಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಪ್ರದೀಪ್‌ಕುಮಾರ್, ನಾಗರಾಜು, ಬಿ.ಇ.ಓ. ಎ.ಟಿ. ಶಿವಲಿಂಗಯ್ಯ ಹಾಜರಿದ್ದರು.

RELATED ARTICLES
- Advertisment -
Google search engine

Most Popular