ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಸರಕಾರಿ ಪ್ರೌಢಶಾಲೆ ಜೋಕಟ್ಟೆ ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ಪ್ರೌಢಶಾಲೆ ಬಾಲಕ ಬಾಲಕಿಯರ ಕ್ರೀಡಾಕೂಟ ಬುಧವಾರ ಇಲ್ಲಿನ ಎನ್ ಐಟಿಕೆ ಮೈದಾನದಲ್ಲಿ ಜರುಗಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ ಅವರು, ಕ್ರೀಡೆಯಿಂದ ಜೀವನದಲ್ಲಿ ಉಲ್ಲಾಸ ಮತ್ತು ಉತ್ಸಾಹ ಹೆಚ್ಚಾಗುತ್ತದೆ, ಕ್ರೀಡೆಯಿಂದ ಮಕ್ಕಳ ಮನಸ್ಸು ಸದೃಢವಾಗಿರುತ್ತದೆ. ಇದು ಓದುವಿಕೆ ಮತ್ತು ಜ್ಞಾನ ಹೆಚ್ಚಳಕ್ಕೆ ಪೂರಕವಾಗಿರುತ್ತದೆ.ಸ್ಪರ್ಧಾ ಮನೋಭಾವನೆ ಇರಬೇಕು ಎಂದು ಶಿಕ್ಷಕರು ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು“ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಅಬೂ ಬಕ್ಕರ್ ಕಳವಾರ್ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಭರತ್. ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಮಂಗಳೂರು ಉತ್ತರ ವಲಯ, ಶ್ರೀ ಅಲಿಯಬ್ಬ, ಸಾಹಿತಿ ಹಾಗೂ ಶಾಲಾಭಿಮಾನಿ. ಶ್ರೀ ಸಂಶುದ್ದಿನ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಶ್ರೀ ವಿನೋದ್ ಕುಮಾರ್ , ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ,ಶ್ರೀ ಹೇಮಂತ್, CRP ಕರಂಬಾರು ಕ್ಲಸ್ಟರ್, ಶ್ರೀ ನಿತಿನ್ ಪುತ್ರನ್, ಅಧ್ಯಕ್ಷರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ತಾಲೂಕು, ಶ್ರೀಮತಿ ಚೆಲುವಮ್ಮ, ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ -1, ಮಂಗಳೂರು ತಾಲೂಕು, ಶ್ರೀ ಅಬ್ದುಲ್ ರಹೀಮ್, SDMC ನಿಕಟಪೂರ್ವ ಅಧ್ಯಕ್ಷರು, ಶ್ರೀ ಶರೀಫ್ ಜೋಕಟ್ಟೆ, SDMC ಸದಸ್ಯರು, ಶ್ರೀ ಆದಂ, ಪ್ರಯೋಜಕರು, ಶ್ರೀ ದೇವಿಕಿರಣ್ ಕಾಂಟ್ರಾಕ್ಟರ್ ಶ್ರೀಮತಿ ಅಗ್ನೆಸ್ ಡೊಟ್ಟಿ ಪಿಂಟೊ, BRP ಪ್ರಾಥಮಿಕ,
ಶ್ರೀ ರಾಕೇಶ್ ಕುಂದರ್, ಉಪಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಕರಂಬಾರು, ಶ್ರೀ ಅಬ್ದುಲ್ ಖಾದರ್ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಜೋಕಟ್ಟೆ, ಶ್ರೀಮತಿ ಆಶಾ, ಟಿ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಜೋಕಟ್ಟೆ, ಇವರೆಲ್ಲರೂ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ದುಲ್ ಖಾದರ್ ಸ್ವಾಗತಿಸಿದರು, ಶ್ರೀಮತಿ ಸವಿತಾ ನಾಯಕ್ ನಿರೂಪಿಸಿದರು,
ಶ್ರೀಮತಿ ಪದ್ಮಿನಿ ಕೋಟ್ಯಾನ್ ವಂದಿಸಿದರು, ಶಾಲಾ ನಾಯಕಿ ಕುಮಾರಿ ಆಯಿಷಾ ರುಮೈಷಾ ಪ್ರತಿಜ್ಞೆ ಭೋದಿಸಿದರು.