ಮೈಸೂರು: ಕ್ರೀಡೆ ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಢವಾಗಿರಲು ಸಹಕಾರಿಯಾಗಿದ್ದು ಪ್ರತಿಯೊಬ್ಬ ಯುವಕರು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಎಸ್.ಕರೀಗೌಡ ತಿಳಿಸಿದರು.
ಮೈಸೂರು ತಾಲ್ಲೂಕು ಲಿಂಗದೇವರಕೊಪ್ಪಲಿನ ಕನಕ ಗ್ರೂಪ್ ವತಿಯಿಂದ ಜೋಡಿ ಮಾರಮ್ಮನ ಹಬ್ಬದ ಪ್ರಯುಕ್ತ ನಡೆದ ೨ನೇ ವರ್ಷದ ಹೊನಲು ಬೆಳಕಿನ ೬೦ ಅಡಿ ಮಿನಿ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಎಲ್.ಡಿ.ಕೆ ಲಯನ್ಸ್ ತಂಡಕ್ಕೆ ಪ್ರಥಮ ಬಹುಮಾನ ೨೦ ಸಾವಿರ ಹಾಗೂ ಟ್ರೋಫಿ ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಯುವಕರು ಕ್ರಿಕೆಟ್ ಪಂದ್ಯಾವಳಿಯನ್ನು ಆಡುತ್ತಿರುವುದು ಸಂತೋಷದ ವಿಷಯವಾಗಿದೆ. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಎಲ್ಲರೂ ಸಮನಾಂತರವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಟ ಆಡಬೇಕು ಎಂದ ಅವರು ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.
ಮಿನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಭಾಗವಹಿಸಿದ್ದವು ಕ್ರಮವಾಗಿ ಎಲ್.ಡಿ.ಕೆ. ಲಯನ್ಸ್ ತಂಡ ಪ್ರಥಮ ಬಹುಮಾನ ನಗದು ೨೦ ಸಾವಿರ ಮತ್ತು ಟ್ರೋಫಿಯನ್ನು ಕ್ಯಾಪ್ಟನ್ ಪುಟ್ಟ ಪಡೆದುಕೊಂಡರೆ ದ್ವಿತೀಯ ಬಹುಮಾನ, ಎಸಿಟಿ ತಂಡಕ್ಕೆ ಲಭಿಸಿದೆ. ನಗದು ೧೦ ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನ ಕನಕ ಗ್ರೂಪ್ ಲಿಂಗದೇವರಕೊಪ್ಪಲು ತಂಡಕ್ಕೆ ೫ ಸಾವಿರ ನಗದು ಟ್ರೋಫಿ ಲಭಿಸಿದೆ.
ಸಮಾರಂಭದಲ್ಲಿ ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್, ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ಮುಖ್ಯಸ್ಥ ಡಾ|| ಶುಶ್ರೂತ್‌ಗೌಡ, ಜಿ.ಪಂ.ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ಸೆಂಟ್ರಿಂಗ್ ರವಿಕುಮಾರ್, ಕನ್ನೇಗೌಡ, ಪೈಲ್ವಾನ್‌ಕುಮಾರ್, ಟೈಲರ್ ರಮೇಶ್, ಮಂಜು, ನಾಗರಾಜು, ಕೆ.ಆರ್.ಪೇಟೆ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ಪಂದ್ಯಾವಳಿಯ ಆಯೋಜಕರಾದ ದರ್ಶನ್, ಮಂಜು, ಮಹೇಶ್, ರಾಜು ಹಾಜರಿದ್ದರು.