ಹೊಸೂರು : ಕೆ.ಆರ್.ನಗರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಬಿಜಿಎಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟು ರೇವಣ್ಣ 800 ಮೀಟರ್ ಓಟದಲ್ಲಿ ಪ್ರಥಮ ಮತ್ತು 5000 ಮೀಟರ್ ಓಟದಲ್ಲಿ ದ್ವೀತಿಯಾ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಈ ಕ್ರೀಡಾ ಪಟುವಿನ ಸಾಧನೆಗೆ ಮೈಸೂರು ಆದಿಚುಂಚನಗಿರಿ ಶಾಖ ಮಠದ ಶ್ರೀ ಸೋಮನಾಥ ಸ್ವಾಮಿಜಿ ಮತ್ತು ಕಾಲೇಜಿನ ಪ್ರಾಂಶುಪಾಲ ಮಹೇಶ್, ಸಂಸ್ಥೆಯ ಶಿಕ್ಷಕರಾದ ಗಿರೀಶ್, ಸತ್ಯನಾರಾಯಣ್ ಅವರು ಅಭಿನಂದಿಸಿದ್ದಾರೆ.