ಹನೂರು : ತಾಲ್ಲೂಕಿನ ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮಗಳಲ್ಲಿ ಚುಕ್ಕಿ ಚರ್ಮರೋಗದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶೆಟ್ಟಳ್ಳಿ ಹಾಗೂ ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂರು ಗ್ರಾಮಗಳಲ್ಲಿ ಈ ಚರ್ಮರೋಗ ಖಾಯಿಲೆಯು ಐದು ಮಂದಿಯಲ್ಲಿ ಕಂಡು ಬಂದಿರುವುದನ್ನು ಗುರುತಿಸಲಾಗಿದ್ದು, ಈ ಬಗ್ಗೆ ವೈಧ್ಯರು ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
ಇದರಲ್ಲಿ ಬೆಂಗಳೂರಿನಲ್ಲಿ ಮೂವರು, ಹನೂರಿನಲ್ಲಿ ಇಬ್ಬರು ಚಿಕಿತ್ಸೆಗಾಗಿ ಮುಂದಾಗಿದ್ದಾರೆ ಇದರಲ್ಲಿ ಒಂದು ಮಗು ಆರೋಗ್ಯವಂತವಾಗಿ ,ಇಬ್ಬರಿಗೆ ಕಣ್ಣಿನ ತೊಂದರೆ ಇದೆ ಹೀಗಾಗಿ ತಪಾಸಣೆ ಬಳಿಕ ಚಿಕಿತ್ಸೆ ಕೈಗೊಳ್ಳಲಾಗುತ್ತದೆ.
ಭಾರತದಲ್ಲಿ ಅಲ್ಲಲ್ಲಿ ಕೆಲವರಲ್ಲಿ ಈ ಖಾಯಿಲೆ ಕಾಣಸಿಗುತ್ತದೆ ಹೀಗಾಗಿ ಇದಕ್ಕೆ ಜನರು ಆತಂಕಕ್ಕೆ ಒಳಗಾಗಬಾರದು. ಖಾಯಿಲೆ ಇದ್ದರೆ ಸಂಬoಧಿಕರಲ್ಲೇ ಮದುವೆ ಮಾಡುವುದನ್ನು ಕಡಿಮೆ ಮಾಡಬೇಕು ಖಾಯಿಲೆ ಇದ್ದವರು ಮುನ್ನೆಚ್ಚರಿಕೆಯಾಗಿ ತಪಾಸಣೆ ಹಾಗೂ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಯಲ್ಲಿ ವೈಧ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ವೈಧ್ಯರಿಂದ ತಿಳಿದು ಬಂದಿದೆ.
ಈ ರೋಗಕ್ಕೆ ತಾಲ್ಲೂಕಿನಲ್ಲಿ ೧೩ ಮಕ್ಕಳು ತುತ್ತಾಗಿದ್ದು ಕಳೆದ ೧೫ ವರ್ಷಗಳ ಹಿಂದೆ ೮ ಮಕ್ಕಳು ಮೃತಪಟ್ಟಿದ್ದು, ಮತ್ತೆ ಐದು ಮಕ್ಕಳಿಗೆ ರೋಗ ಕಾಣಿಸಿಕೊಂಡಿದೆ ಈ ಮಕ್ಕಳು ಸಹ ೧೩-೧೪ ವರ್ಷದ ವರೆಗೆ ಬದುಕುತ್ತಾರೆ ಬಳಿಕ ಇವರು ಮೃತಪಡುತ್ತಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಈ ರೋಗವು ಮಗು ಜನನವಾದ ೯ ತಿಂಗಳ ನಂತರ ಕಾಣಸಿಕೊಳ್ಳುತ್ತದೆ. ತದನಂತರ ಕಪ್ಪು ಕಪ್ಪುಯಾಗಿ ಚರ್ಮದ ಮೇಲೆ ಕಲೆಗಳು ಕಾಣಿಸಿಕೊಂಡು ವಯಸ್ಸು ಆಗುತ್ತಿದ್ದಂತೆ ಕಣ್ಣಿನ ದೋಷ ಹಾಗೂ ಕೈ-ಕಾಲು ಸ್ವಾಧೀನ ಕಳೆದುಕೊಂಡು ಮೃತಪಡುತ್ತಾರೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಈ ರೋಗದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಏನು ಪರಿಹಾರ ಮಾಡಬಹುದು ಚೆರ್ಚಿಸಲಾಗುವುದು.
ಮಾನವೀಯತೆ ದೃಷ್ಟಿಯಿಂದ ಪ್ರತಿ ಮಾಹೆ ಮಾಶಸನ ಕೊಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರಲ್ಲದೇ ವೈದ್ಯರ ಪ್ರಕಾರ ಇದು ರಕ್ತ ಸಂಬಂಧಗಳಲ್ಲಿ ಮದುವೆಯಾಗುವುದರಿಂದ ಈ ರೋಗವು ಕಾಣಿಸಿಕೊಂಡಿದೆ ಎನ್ನಲಾಗಿದ್ದು ಆದಷ್ಟು ಗ್ರಾಮಸ್ಥರು ಸಂಬoಧಿಕರಲ್ಲಿ ಮದುವೆ ಯಾಗುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ಉಪವಿಭಾಗಾದಿಕಾರಿ ಮಹೇಶ್, ವೈದ್ಯಾಧಿಕಾರಿ ಡಾ. ಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿಗಳಾದ ಕುಮಾರಸ್ವಾಮಿ, ಕಾರ್ತಿಕ್ ಹಾಗೂ ಇನ್ನೀತರರು ಇದ್ದರು.
