ಎಡತೊರೆ ಮಹೇಶ್
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೋಕು ಆಡಳಿತ ಮತ್ತು ಅಖಿಲ ಕರ್ನಾಟಕ ಕುಳುವ ಮಹಾಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಡಳಿತ ಸೌಧದ ಆವರಣದಲ್ಲಿ ಶ್ರೀ ಕುಳುವ ನುಲಿಯ ಚಂದಯ್ಯ ಶರಣರ ಜಯಂತಿಯನ್ನು ಆಚರಿಸಲಾಯಿತು.
ಈ ಜಯಂತಿ ಉದ್ಘಾಟಿಸಿದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಈ ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳನ್ನು ಸಂವಿಧಾನದಲ್ಲಿ ಹಕ್ಕು ಮತ್ತು ಅವಕಾಶವನ್ನು ಮಾಡಿಕೊಡುವ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ರವರು ಎಂದು ಸ್ಮರಿಸಿಕೊಂಡರು.

ಹಾಗೇ ನುಲಿಯ ಚಂದಯ್ಯ ಶರಣರು ನೂಲು ನೇಯುವ ಮೂಲಕ ಮಕ್ಕಳ ವಿಧ್ಯಾಭ್ಯಾಸವನ್ನ ಮಾಡಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಕಾಯಕಯೋಗಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ನುಲಿಯ ಚಂದಯ್ಯ ರವರ ಕುರಿತು ಶ್ರೀಮತಿ ರೂಪ ಕುಮಾರಸ್ವಾಮಿ ಮಾತಾನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಬಿಜೆ ಮಹೇಂದ್ರ EO ಧರಣೇಂದ್ರ ಶಿರಸ್ತಿದಾರರಾದ ಮಹೇಶ್, ನಾರಾಯಣಸ್ವಾಮಿ , ಆರ್‌ಪಿಐ ಜಿಲ್ಲಾ ಅಧ್ಯಕ್ಷರಾದ ಅನುಷಾ ನಾಗರಾಜ್ ,ಬಿ ಓ ಮರಯ್ಯ ಪುರಸಭೆಯ Co ಸುರೇಶ್ ಮುಖಂಡರು. ಅಧಿಕಾರಿಗಳು. ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.