ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಕ್ಕೆ ಶ್ರೀ ಕೃಷ್ಣ ಸ್ವರೂಪಿ ಶ್ರೀ ಶ್ರೀ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಬಗ್ಗೆ ವಿವರಿಸಿ ತಿಳಿಸಲಾಯಿತು. ನಮ್ಮ ವಿದ್ಯಾಸ್ಪಂದನ ಸಂಸ್ಥೆಯು ಸಾರ್ವಜನಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಸ್ಥಾಪಿಸಲಾಯಿತು. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಸಹಾಯ ಮಾಡುವ ಉದ್ದೇಶದಿಂದ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ನಮ್ಮ ತಂದೆಯವರಾದ ಗುಂಡಪ್ಪ ನವರ ಹೆಸರಲ್ಲಿ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಧಾರ್ಮಿಕ ಚಟುವಟಿಕೆಗಳು ಹಾಗೂ ಸಂಸ್ಕಾರ ವಿಚಾರ ಜಾಗೃತಿ ಮಾಡುವ ಉದ್ದೇಶದ ಸಣ್ಣ ಪ್ರಯತ್ನ ಎಂದು ಸಂಸ್ಥೆಯ ಸ್ಥಾಪಕ ಕೆ.ಆರ್.ಗಣೇಶ್ ವಿವರಿಸಿದರು.
ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಮೂಲಕ ಸಂಧ್ಯಾವಂದನೆಯ ಜಾಗೃತಿ ಹಾಗೂ ತರಬೇತಿ ಮಾಡಬೇಕು ಎಂದು ಪುನೀತ್ ಜಿ ಅವರಿಗೆ ಆದೇಶಿಸಿದರು. ಸಂಧ್ಯಾವಂದನೆಯ ಪುಸ್ತಕ, ಜನಿವಾರ, ಶೃಂಗೇರಿ ಮಠದ ಉಭಯ ಜಗದ್ಗುರುಗಳ ಭಾವಚಿತ್ರ, ಶಂಕರಾಚಾರ್ಯರ ಭಾವಚಿತ್ರವನ್ನು ಆಶೀರ್ವಾದಿಸಿ ಪೃಥು ಪಿ ಅದ್ವೈತ್ ಗೆ ನೀಡಿ ಮುಂದೆ ಇದೆಲ್ಲದರ ಜವಾಬ್ದಾರಿ ನಿನ್ನದು ಎಂಬ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶ್ರೀಯುತ ಕೆ.ಆರ್.ಗಣೇಶ್, ಶ್ರೀಮತಿ ಸರಸ್ವತಿ, ಪುನೀತ್ ಜಿ ಕೂಡ್ಲೂರು, ಶ್ರೀಮತಿ ಶುಭಾ ಅರುಣ್, ನಾಗರಾಜ್,ಕೂಡ್ಲೂರು ಗುಂಡಪ್ಪ ನವರ ಕುಟುಂಬ ಸದಸ್ಯರು ಹಾಗೂ ವಿಕ್ರಂ ಅಯ್ಯಂಗಾರ್ ಇದ್ದರು.