ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಕಟ್ಟೆಯ ಶ್ರೀರಾಮ ದೇವಾಲಯದಲ್ಲಿ ಬುಧವಾರ ಶ್ರೀರಾಮ ನವಮಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆದವು ದೇವಾಲಯದಲ್ಲಿ ಬೆಳಿಗ್ಗೆ ೫ ರಿಂದಲೇ ಶ್ರೀರಾಮ ದೇವರಿಗೆ ಎಳನೀರು,ಅರಿಸಿನ ಕುಂಕುಮ,ಹಾಲು,ಮೊಸರು ಮತ್ತು ಕಾವೇರಿ ನೀರಿನಿಂದ ಬಾರಿ ಮಂತ್ರ ಘೋಷಗಳೊಂದಿಗೆ ಅಭಿಷೇಕವನ್ನು ಮಾಡಲಾಯಿತು.
ನಂತರ ಶ್ರೀರಾಮ ದೇವರ ಮೇರವಣಿ ಮಾಡಿದ ಬಳಿಕ ದೇವಾಲಯದಲ್ಲಿ ತೀರ್ಥ ಪ್ರಸಾದ ಮತ್ತು ಮಹಾಮಂಗಳಾರತಿ ಮಾಡಿದ ಹಾಜರಿದ್ದ ಸಾವಿರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ಶ್ರೀರಾಮ ನವಮಿಯ ಪ್ರಯುಕ್ತ ದೇವಾಯಲದ ಅವರಣವನ್ನು ತಳಿರು-ತೋರಣಗಳಿಂದ ಶೃಂಗಾರಿಸಿ ಬಣ್ಣ-ಬಣ್ಣದ ರಂಗೋಲಿ ಪೂಜಾ ಕಾರ್ಯಕ್ಕೆ ಮೆರಗು ತರಲಾಗಿತ್ತಲ್ಲದೇ ದಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್ ಅವರು ನಡೆಸಿ ಕೊಟ್ಟರು.
ದೇವಾಲಯಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅಷ್ಟು ಕಟ್ಟಾಗಿ ಪ್ರಸಾದ ಮತ್ತು ಪಾನಕದ ವಿತರಣೆಯನ್ನು ದೇವಾಲಯದ ಆಡಳಿತಾಧಿಕಾರಿ ರಘು ಅವರ ನೇತೃತ್ವದಲ್ಲಿ ಸಾಲಿಗ್ರಾಮ ತಾಲೂಕು ಆಡಳಿತವು ಮಾಡಿ ಭಕ್ತಾಧಿಗಳ ಮೆಚ್ಚುಗೆಗೆ ಪಾತ್ರವಾಯಿತು ಶಾಸಕ ಡಿ.ರವಿಶಂಕರ್ ಕೂಡ ದೇವಾಲಯಕ್ಕೆ ಬೇಟಿ ನೀಡಿ ಶ್ರೀರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಪಾರುಪತ್ತೆದಾರರಾದ ಯತೀರಾಜ್ ,ಪವನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
